Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ; ವ್ಯಕ್ತಿಯನ್ನು ತಡೆದು ಜೀವ ಬೆದರಿಕೆ

ಬೆಳ್ತಂಗಡಿ; ವ್ಯಕ್ತಿಯನ್ನು ತಡೆದು ಜೀವ ಬೆದರಿಕೆ

- Advertisement -
- Advertisement -

ಬೆಳ್ತಂಗಡಿ;  ತನ್ನನ್ನು ತಡೆದು ಮೂವರು ನನಗೆ  ಜೀವ ಬೆದರಿಕೆ ಹಾಕಿದ್ದಾರೆ ಎಂದು ಬೆಳ್ತಂಗಡಿ ನಿವಾಸಿ ಹರೀಶ್‌  ಆಚಾರ್ಯ(35) ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹರೀಶ್ ಆಚಾರ್ಯ ಅವರು ದಿನಾಂಕ  21.03.2024 ರಂದು ರಾತ್ರಿ ಉಜಿರೆ  ಗ್ರಾಮದ  ಉಜಿರೆ ಗ್ರಾಮದ ಮನೋಜ್ (35), ಕಲ್ಮಂಜ ಬೆಳ್ತಂಗಡಿ ಪ್ರಜ್ವಲ್‌  ಗೌಡ ಕೆ ವಿ (35) ಹಾಗೂ ಉಜಿರೆ ಬೆಳ್ತಂಗಡಿ ಜಯಂತ (34) ಎಂಬವರುಗಳು ಕೆಎ-21-ಎನ್-9957‌ ನೇ ನಂಬ್ರದ ಕಾರು ಹಾಗೂ ಒಮಿನಿ ಗಾಡಿಯಲ್ಲಿ  ಬಂದು ನನ್ನನ್ನು ತಡೆದು ನಿಲ್ಲಿಸಿ,  ಅವಾಚ್ಯ  ಶಬ್ದಗಳಿಂದ ಬೈದು,  ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಹರೀಶ್ ಅವರ  ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅಕ್ರ ನಂ 38/2024   ಕಲಂ: 143,147,341,504,506, r/w 149 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!