- Advertisement -
- Advertisement -
ಸುಳ್ಯ; ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿ ಕೊಡುವಂತೆ ಹುಡುಗಿ ಕೇಳಲು ಆಕೆಯ ಮನೆಗೆ ಹೋದಾಗ ಯುವತಿಗೆ ಹಲ್ಲೆ ಮಾಡಿ ಯುವಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ.
ಅಜ್ಜಾವರ ಗ್ರಾಮದ 22 ವರ್ಷ ಯುವತಿ ಹಾಗೂ ಪುತ್ತೂರು ಕೊಳ್ತಿಗೆಯ ಕೊಂರ್ಬಡ್ಕ ಚಂದ್ರಶೇಖರ (28) ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಪ್ರೀತಿಗೆ ಯುವತಿಯ ಒಪ್ಪಿಗೆ ಇದ್ದರೂ ಆಕೆಯ ಮನೆಯವರು ವಿರೋಧಿಸುತ್ತಿದ್ದು, ಜೀವ ಬೆದರಿಕೆ ಹಾಕಿದ್ದಾರೆಂದು ಯುವಕ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ.
ಇನ್ನು ಹೆಣ್ಣು ಕೇಳಲು ಚಂದ್ರಶೇಖರ್ ಹಾಗೂ ಮನೆಯವರು ಯುವತಿಯ ಮನೆಗೆ ಹೋದಾಗ ಯುವತಿಯ ತಂದೆ ಯುವತಿಗೆ ಹಲ್ಲೆ ನಡೆಸಿದ್ದು, ಯುವಕನಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
- Advertisement -