ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕೌಡಂಗೆ ಮನೆ ನಿವಾಸಿಗಳಾದ ನಳಿನಿ ಮತ್ತು ಅವರ ಮನೆಯವರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.14ರಂದು ರಾತ್ರಿ 7.30ರ ವೇಳೆಗೆ ತಮ್ಮ ಮನೆಯಲ್ಲಿ ನಳಿನಿ ಅವರ ಗಂಡ ಮಹೇಶ್ ಮತ್ತು ಮಗು ಇರುವಾಗ ಸಂಜೆ ಕುಖ್ಯಾತ ಅಕ್ರಮ ಮರಳು ಕಳ್ಳರಾದ ರಾಧಾಕೃಷ್ಣ ಗೌಡ ಮತ್ತು ರಂಜಿತ್ ಗೌಡ ಹಾಗೂ ಆನಂದ ಗೌಡ, ಸುದರ್ಶನ್, ಸುಧಾಕರ ಮತ್ತು ಇತರ 5 ಮಂದಿ 3 ವಾಹನಗಳಲ್ಲಿ ಬಂದು ಮನೆಗೆ ಅಕ್ರಮ ಪ್ರವೇಶಿಸಿ ಬೆದರಿಕೆ ಒಡ್ಡಿದ್ದಾರೆ. ಮರಳು ತೆಗೆಯುವುದರ ವಿರುದ್ಧ ನೀವು ದೂರು ನೀಡಿದ್ದೀರಿ. ನಿಮ್ಮನ್ನು ಹೀಗೆ ಬಿಡುವುದಿಲ್ಲ. ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಆರೋಪಿಗಳು ಒಂದು ಮಾರುತಿ 800 ಕಾರು, ಒಂದು ಬುಲೆಟ್ ಮತ್ತು ಒಂದು ಹೀರೋ ಹೋಂಡಾ ವಾಹನಗಳಲ್ಲಿ ಬಂದು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ದೊಣ್ಣೆ ಹಾಗೂ ರಾಡ್ ಹಿಡಿದು ಬೆದರಿಕೆ ಒಡ್ಡಿದ್ದಾರೆ.

ನಳಿನಿ ಅವರ ಮೈಮೇಲೆ ಕೈ ಮಾಡಿ ಬಳೆಗಳನ್ನು ಒಡೆದಿದ್ದಾರೆ. ಅಷ್ಟರಲ್ಲಿ ನೆರೆ ಮನೆಯವರು ಧಾವಿಸಿ ಬಂದಿದ್ದು ಅಷ್ಟರಲ್ಲಿ ಅವರು ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳು ಪ್ರಕರಣ ದಾಖಲಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು , ಬೆಳ್ತಂಗಡಿ ಪೊಲೀಸರು ಆರೋಪಿಗಳಾಗಿ ಬಲೆ ಬಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 113/2023 ಕಲಂ 143,147,148,448,506,354 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.