Monday, April 29, 2024
Homeತಾಜಾ ಸುದ್ದಿಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆ ಪ್ರಾರಂಭ; ತೆರೆದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು

ಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆ ಪ್ರಾರಂಭ; ತೆರೆದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು

spot_img
- Advertisement -
- Advertisement -

ಶಬರಿಮಲೆ: ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಎರಡು ತಿಂಗಳ ದೀರ್ಘ ವಾರ್ಷಿಕ ಯಾತ್ರಾ ಋತುವಿನ ಆರಂಭವಾಗಿದ್ದು, ಮಂಡಲಂ- ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯದ ಬಾಗಿಲು ಗುರುವಾರದಂದು ತೆರೆಯಲಾಗಿದೆ.

ದೇವಾಲಯದ ಗರ್ಭಗುಡಿಯನ್ನು ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ನಿರ್ಗಮಿತ ಪ್ರಧಾನ ಅರ್ಚಕ ಕೆ.ಜಯರಾಮನ್ ನಂಬೂತಿರಿ ಅವರ ಅನುಪಸ್ಥಿತಿಯಲ್ಲಿ ತೆರೆದರು.

ಶಬರಿಮಲೆಗೆ ಈಗಾಗಲೇ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದು ಸರತಿ ಸಾಲಿನಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ 41 ದಿನಗಳ ಕಾಲ ದೇಗುಲದಲ್ಲಿ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ಆರಂಭವಾಗಲಿದೆ. ಜನವರಿ 15ರ ಮಕರ ಸಂಕ್ರಮಣ ದಿನದಂದು ಮಕರವಿಳಕ್ಕು ನೆರವೇರಲಿದ್ದು, ದೇಶದಾದ್ಯಂತ ಲಕ್ಷಾಂತರು ಭಕ್ತರು ಶಬರಿಮಲೆಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ತೀರ್ಥಯಾತ್ರೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆಗಮಿಸುವುದರಿಂದ ಸಾಲುಗಳನ್ನು ನಿಯಂತ್ರಿಸಲು ಸಿಬ್ಬಂದಿ ನೇಮಕ ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ದೇವಾಲಯಕ್ಕೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಮೂಲ ಸೌಕರ್ಯಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ, ಶೌಚಾಲಯ ಸೇರಿದಂತೆ ಭಕ್ತರಿಗೆ ತಂಗುವ, ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೇ ಕೇರಳ ಸರ್ಕಾರದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!