Thursday, May 16, 2024
Homeತಾಜಾ ಸುದ್ದಿಯುಕೆ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿದ್ದ ಹಣಾಹಣಿಗೆ ತೆರೆ; ರಿಷಿ  ಸುನಕ್ ಗೆ ನಿರಾಸೆ, ಲಿಜ್​ ಟ್ರಸ್​​...

ಯುಕೆ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿದ್ದ ಹಣಾಹಣಿಗೆ ತೆರೆ; ರಿಷಿ  ಸುನಕ್ ಗೆ ನಿರಾಸೆ, ಲಿಜ್​ ಟ್ರಸ್​​ ಗೆ ಪ್ರಧಾನಿ ಪಟ್ಟ

spot_img
- Advertisement -
- Advertisement -

ನವದೆಹಲಿ: ಯುಕೆ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿದ್ದ ಹಣಾಹಣಿಗೆ ತೆರೆ ಬಿದ್ದಿದೆ. ಇನ್​ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಎನ್​.ಆರ್​. ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯ ಪತಿ, ಬ್ರಿಟನ್​ನ ಸಂಸದ ರಿಷಿ ಸುನಕ್ ಅವರಿಗೆ ನಿರಾಸೆಯಾಗಿದ್ದು, ಪ್ರಧಾನಿ ಹುದ್ದೆ ಅವರ ಕೈ ತಪ್ಪಿದೆ.

ಯುಕೆ ವಿದೇಶ ಸಚಿವೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್​ ಟ್ರಸ್​​ ನೂತನ ಪ್ರಧಾನಿ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ರಿಷಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಅದು ಸಫಲವಾಗದ್ದರಿಂದ ರಿಷಿ ಪರಾಭವಗೊಂಡಿದ್ದಾರೆ.

ಈ ಕುರಿತು ಅಧಿಕೃತ ಘೋಷಣೆ ಇನ್ನೇನು ಆಗಲಿದ್ದು, 47 ವರ್ಷದ ಲಿಜ್​ ಟ್ರಸ್​ ಬ್ರಿಟನ್​ನ ಮೂರನೇ ಮಹಿಳಾ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.

- Advertisement -
spot_img

Latest News

error: Content is protected !!