Saturday, May 18, 2024
Homeತಾಜಾ ಸುದ್ದಿಮತಾಂತರ ನಿಷೇಧ ಕಾಯ್ದೆ ಶೀಘ್ರ ಅನುಷ್ಠಾನವಾಗಲಿ: ಕೇಮಾರು ಶ್ರೀ

ಮತಾಂತರ ನಿಷೇಧ ಕಾಯ್ದೆ ಶೀಘ್ರ ಅನುಷ್ಠಾನವಾಗಲಿ: ಕೇಮಾರು ಶ್ರೀ

spot_img
- Advertisement -
- Advertisement -

ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.

ಸರಕಾರವು ಸದನದಲ್ಲಿ ಮಂಡಿಸಿರುವ ಮತಾಂತರ ನಿಷೇಧ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ. ಇಲ್ಲಿ ಸಂಘರ್ಷವಿಲ್ಲದ ಶಾಂತಿ, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಹಾಗೂ ಬಲವಂತದ ಮತಾಂತರವನ್ನು ಸಮಾಜದಲ್ಲಿ ಹತ್ತಿಕ್ಕಲು ಈ ಕಾಯ್ದೆ ಸಮರ್ಪಕವಾಗಿ ಬಳಕೆಯಾಗಬೇಕು.

ಈ ಕಾಯ್ದೆ ಶೀಘ್ರ ಅನುಷ್ಠಾನಕ್ಕೆ ಬರಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಈ ಕಾಯ್ದೆಯಲ್ಲಿ ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿ ಮಾಡಲಾಗುವುದು, ಮತಾಂತರದ ಉದ್ದೇಶದಿಂದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ, ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು ಹಾಗೂ ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು ಹೀಗೆ ಹಲವಾರು ಅಂಶಗಳನ್ನು ಈ ಕಾಯ್ದೆ ಒಳಗೊಂಡಿದೆ.

ಮತಾಂತರ ಕಾಯ್ದೆಯನ್ನು ಸರಕಾರವು ಸದನದಲ್ಲಿ ಮಂಡಿರುವುದು ಉತ್ತಮ ಕಾರ್ಯ. ಬಲವಂತದ ಮತಾಂತರದಿಂದ ಸಮಾಜದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತದ. ಈ ಕಾಯಿದೆಯಿಂದ ಸಮಾಜದಲ್ಲಿ ಶಾಂತಿ ನೆಲೆಗೊಳ್ಳಲಿ ಎಂದು ಕೇಮಾರುಶ್ರೀ ಗಳು ಹೇಳಿದರು.

- Advertisement -
spot_img

Latest News

error: Content is protected !!