Friday, August 21, 2026
Homeತಾಜಾ ಸುದ್ದಿಈ ಚಿರತೆ ಮರಿ ಇಡೋಕೆ ಆರಿಸಿಕೊಂಡ ಜಾಗ ಯಾವುದು ಗೊತ್ತಾ?

ಈ ಚಿರತೆ ಮರಿ ಇಡೋಕೆ ಆರಿಸಿಕೊಂಡ ಜಾಗ ಯಾವುದು ಗೊತ್ತಾ?

- Advertisement -
- Advertisement -

ಮಹಾರಾಷ್ಟ್ರ : ನಾಸಿಕ್‌ ನಲ್ಲಿರುವ ಇಗಟ್ಪುರಿಯಲ್ಲಿ ಗುಡಿಸಲೊಂದರಲ್ಲಿ ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿರುವ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ.

ತಾಯಿ ಚಿರತೆ ಹಾಗೂ ನಾಲ್ಕು ಮರಿಗಳು ಆರೋಗ್ಯವಾಗಿದ್ದು, ಸ್ಥಳದಲ್ಲಿ ಓಡಾಡಿಕೊಂಡಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಚಿರತೆ ಮರಿಗಳು ಜತೆಯಲ್ಲಿಯೇ ಇರುವುದರಿಂದ ಇದೀಗ ಚಿರತೆಯನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರು ಚಿರತೆ ಹಾಗೂ ಮರಿಗಳು ಆಟವಾಡಿಕೊಂಡಿರುವ 51 ಸೆಕೆಂಡ್‌ನ ಈ ವಿಡಿಯೊಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 1.93 ಲಕ್ಷ ಮಂದಿ ವೀಕ್ಷಿಸಿದ್ದು, 20 ಸಾವಿರ ಲೈಕ್‌, ಮೂರು ಸಾವಿರ ರಿಟ್ವೀಟ್‌ ಹಾಗೂ 175ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

- Advertisement -

Latest News

error: Content is protected !!