Friday, April 26, 2024
Homeಕರಾವಳಿಬಂಟ್ವಾಳ: ಫರಂಗಿಪೇಟೆ, ವಳಚ್ಚಿಲ್ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆ: ಸ್ಥಳೀಯರಲ್ಲಿ ಆತಂಕ

ಬಂಟ್ವಾಳ: ಫರಂಗಿಪೇಟೆ, ವಳಚ್ಚಿಲ್ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆ: ಸ್ಥಳೀಯರಲ್ಲಿ ಆತಂಕ

spot_img
- Advertisement -
- Advertisement -

ಬಂಟ್ವಾಳ: ಫರಂಗಿಪೇಟೆ, ವಳಚ್ಚಿಲ್ ಪರಿಸರದಲ್ಲಿ ಶನಿವಾರ ಚಿರತೆಯೊಂದು ಕಾಣಿಸಿಕೊಂಡು ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮಾರಿಪಳ್ಳದ ನಿವಾಸಿ ರಫೀಕ್ ಎಂಬವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ಎಂಬಲ್ಲಿ ಚಿರತೆಯೊಂದು ಕಂಡಿದೆ ಎನ್ನಲಾಗಿದೆ. .

ಹತ್ತನೇ ಮೈಲುಗಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿರತೆಯನ್ನು ನೋಡಿದ್ದು ಕೂಡಲೇ ಅದು ಹೆದ್ದಾರಿ ಪಕ್ಕದ ಖಾಲಿ ಜಾಗದಲ್ಲಿ ಓಡಿದೆ ಎಂದು ತಿಳಿಸಿದ್ದಾರೆ.ಚಿರತೆಯ ಬಗ್ಗೆ ಅವರು ಪಕ್ಕದ ಹೊಟೇಲ್ ಒಂದರಲ್ಲಿದ್ದ ಸ್ಥಳೀಯರಲ್ಲಿ ಮಾಹಿತಿ ನೀಡಿದ್ದು ಬಳಿಕ ಈ ಸುದ್ದಿ ಪರಿಸರದಲ್ಲಿ ಹರಿದಾಡಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಇನ್ನು ಫರಂಗಿಪೇಟೆ ಸಮೀಪದ ವಳಚ್ಚಿಲ್ ಪದವು ಎಂಬಲ್ಲಿನ ಜನರು ಶನಿವಾರ ಬೆಳಗ್ಗೆ ಪರಿಸರದಲ್ಲಿ ಚಿರತೆಯೊಂದನ್ನು ನೋಡಿದ್ದಾರೆ ಎನ್ನಲಾಗಿದೆ. ಅದೇ ಚಿರತೆ ರಾತ್ರಿ ಹತ್ತನೇ ಮೈಲುಗಲ್ಲಿನಲ್ಲಿ ಕಂಡುಬಂದಿರಬಹುದು ಎಂದು ಸ್ಥಳೀಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -
spot_img

Latest News

error: Content is protected !!