Monday, March 17, 2025
Homeತಾಜಾ ಸುದ್ದಿಕೋಳಿ ಫಾರ್ಮ್ ಗೆ ನುಗ್ಗಿ 200 ನಾಟಿ ಕೋಳಿಗಳನ್ನು ತಿಂದು ಹಾಕಿದ ಚಿರತೆ

ಕೋಳಿ ಫಾರ್ಮ್ ಗೆ ನುಗ್ಗಿ 200 ನಾಟಿ ಕೋಳಿಗಳನ್ನು ತಿಂದು ಹಾಕಿದ ಚಿರತೆ

spot_img
- Advertisement -
- Advertisement -

ತುಮಕೂರು:  ಚಿರತೆಯೊಂದು ಕೋಳಿ ಫಾರ್ಮ್ ಗೆ ನುಗ್ಗಿ 200 ನಾಟಿ ಕೋಳಿಗಳನ್ನು ತಿಂದು ಹಾಕಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಯಗಚಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾತ್ರಿ ವೇಳೆ ಕೋಳಿ ಫಾರಂಗೆ ನುಗ್ಗಿದ ಚಿರತೆ ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ಹಾಕಿದೆ. ಕುಟುಂಬವೊಂದು ತಮ್ಮ ಜೀವನೋಪಾಯಕ್ಕಾಗಿ ಊರಿನ ಹೊರಭಾಗದಲ್ಲಿದ್ದ ತೋಟದಲ್ಲಿ ನಾಳಿ ಕೋಳಿ ಫಾರಂ ಮಾಡಿಕೊಂಡಿದ್ದರು. ಇದಕ್ಕಾಗಿ ತೋಟದಲ್ಲಿ ಸುಸಜ್ಜಿತವಾದ ಫಾರಂ ನಿರ್ಮಿಸಿ ಜಾಲರಿಯನ್ನು ಕೂಡ ಅಳವಡಿಸಿದ್ದರು.

ಆದರೆ ಹೊಲದಲ್ಲಿರುವ ನಾಟಿ ಕೋಳಿ ಫಾರಂ ಒಳಗೆ ನುಗ್ಗಿರುವ ಚಿರತೆ ಬರೋಬ್ಬರು 200 ಕೋಳಿಗಳ ರಕ್ತವನ್ನು ಹೀರಿದೆ. ಕೆಲವು ಕೋಳಿಗಳನ್ನು ಸಂಪೂರ್ಣವಾಗಿ ತಿಂದಿದ್ದು, ಇನ್ನು ಕೆಲವು ಕೋಳಿಗಳ ರಕ್ತವನ್ನು ಮಾತ್ರ ಹೀರಿಕೊಂಡು ಕೆಲವು ಭಾಗವನ್ನು ತಿಂದು, ಅರ್ಧ ದೇಹವನ್ನು ಬಿಟ್ಟು ಹೋಗಿದೆ. ಇದರಿಂದ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ.

- Advertisement -
spot_img

Latest News

error: Content is protected !!