Friday, June 5, 2026
Homeಕರಾವಳಿಬಂಟ್ವಾಳ: ವಕೀಲರ ಸಂಘದ ವತಿಯಿಂದ ಭಾರತಿಗೆ ಪುಷ್ಪ ನುಡಿಯ ದೀವಿಗೆ ಎಂಬ ಕಾರ್ಯಕ್ರಮ

ಬಂಟ್ವಾಳ: ವಕೀಲರ ಸಂಘದ ವತಿಯಿಂದ ಭಾರತಿಗೆ ಪುಷ್ಪ ನುಡಿಯ ದೀವಿಗೆ ಎಂಬ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಪುಷ್ಪ ನುಡಿಯ ದೀವಿಗೆ ಎಂಬ ಕಾರ್ಯಕ್ರಮ ಇಂದು ಬಂಟ್ವಾಳದ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

 ಭಾರತ ಮಾತೆಗೆ ಪುಪ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಿಕ್ಸೂಚಿ ಭಾಷಣವನ್ನು ಬೆಳ್ತಂಗಡಿಯ ಹಿರಿಯ ವಕೀಲರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಅವರು ಮಾಡಿದರು.

ಕಾರ್ಯಕ್ರಮದಲ್ಲಿ  ನ್ಯಾಯಧಿಶರುಗಳಾದ ಶ್ರೀಮತಿ ಭಾಗ್ಯಮ್ಮ, ಶ್ರೀ ಚಂದ್ರಶೇಖರ ವೈ ತಳವಾರ, ಶ್ರೀ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘ (ರಿ) ಬಂಟ್ವಾಳದ ಅಧ್ಯಕ್ಷರಾದ ಶ್ರೀ ಬಿ. ಗಣೇಶಾನಂದ ಸೋಮಯಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪ್ರಸಾದ್ ಕುಮಾರ್ ರೈ ಸ್ವಾಗತಿಸಿದರು. ವಕೀಲರಾದ ವಿನೋದ್ ಅವರು ವಂದಿಸಿದರು. ಕಾರ್ಯಕ್ರಮವನ್ನು ವಕೀಲರಾದ ನಿತಿನ್  ನಿರ್ವಹಿಸಿದರು. ವಕೀಲರ ಸಂಘ (ರಿ ) ಬಂಟ್ವಾಳದ ಹಿರಿಯ ಕಿರಿಯ ವಕೀಲ ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!