ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಮತ್ತು ವಕೀಲರ ಸಂಘ ಬೆಳ್ತಂಗಡಿ ಇದರ ವತಿಯಿಂದ ಆಹಾರದ ಕಿಟ್ ವಿತರಣೆ ಮತ್ತು ಕೊರೋನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕರಪತ್ರ ಹಾಗೂ ಜಾಗೃತಿ ಮಾಹಿತಿ ಕಾರ್ಯಕ್ರಮ ಬೆಳ್ತಂಗಡಿ ನ್ಯಾಯಾಲಯದ ಆವರಣದಿಂದ ಇಂದು ಪ್ರಾರಂಭಗೊಂಡಿತು.
ತಾಲೂಕಿನ ನಾರಾವಿ ಬಸದಿ, ಬೆಳ್ತಂಗಡಿ ಜ್ಯೂನಿಯರ್ ಕಾಲೇಜು, ವಕೀಲರ ಭವನ ಹಾಗು ಉಜಿರೆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡ ಸುಮಾರು 40 ಮಂದಿ ವಲಸೆ ಕಾರ್ಮಿಕರಿಗೆ 800 ರೂ. ಮೌಲ್ಯದ ಆಹಾರದ ಕಿಟ್ ಸಹಿತ ತಲಾ 200 ರೂ. ನಗದನ್ನು ನೀಡಲಾಯಿತು.
ಕಿಟ್ ಗಳನ್ನು ವಿತರಿಸಿ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನ ನ್ಯಾಯಾಧೀಶ ನಾಗೇಶ, ಪ್ರಪಂಚವೇ ಸಂಕಷ್ಟವಿದೆ. ಲಾಕ್ಡೌನ್ ಸಂದರ್ಭ ಸಾಮಾಜಿಕ ಅಂತರ ಕಾಯ್ದು ಕೊಂಡು ಜಾಗೃತಿ ವಹಿಸಬೇಕು. ಇವತ್ತಿನ ಸ್ಥಿತಿಯಲ್ಲಿ ಕೆಲವು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು ಅವರಿಗೆ ಸಹಾಯಹಸ್ತ ಚಾಚಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಎಮ್. ಆನಂದ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ. ಎಪಿಪಿ ಕಿರಣ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಲೋಸಿಯೆಸ್ ಲೋಬೋ, ಕಾರ್ಯದರ್ಶಿ ಶ್ರೀಕೃಷ್ಣ ಶೆಣೈ, ಕೋಶಾಧಿಕಾರಿ ಹರಿಪ್ರಕಾಶ್, ಜತೆ ಕಾರ್ಯದರ್ಶಿ ಮಮತಾಜ್ ಬೇಗಂ, ವಕೀಲರದಾ ಶಿವಕುಮಾರ್, ಚಿದಾನಂದ, ನ್ಯಾಯಾಲಯದ ಸಿಬ್ಬಂದಿಗಳು. ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ: ವಕೀಲರ ಸಂಘದಿಂದ ಆಹಾರದ ಕಿಟ್ ವಿತರಣೆ, ಕರಪತ್ರ ಅನಾವರಣ
- Advertisement -
- Advertisement -
- Advertisement -