Tuesday, May 7, 2024
Homeಕರಾವಳಿಬಿಜೆಪಿ ಮುಖಂಡ ಪ್ರವೀಣ್ ಅಂತಿಮ ಯಾತ್ರೆ ವೇಳೆ ಲಾಠಿ ಚಾರ್ಜ್ ಪ್ರಕರಣ: ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ...

ಬಿಜೆಪಿ ಮುಖಂಡ ಪ್ರವೀಣ್ ಅಂತಿಮ ಯಾತ್ರೆ ವೇಳೆ ಲಾಠಿ ಚಾರ್ಜ್ ಪ್ರಕರಣ: ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದ ಸುಬ್ರಹ್ಮಣ್ಯ ಠಾಣೆ ಪಿಎಸೈ, ಹೆಡ್ ಕಾನ್ಸ್ಟೇಬಲ್ ಸಹಿತ ಮೂವರ ವರ್ಗಾವಣೆ

spot_img
- Advertisement -
- Advertisement -

ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟರ್ ಅವರ ಅಂತಿಮ ಯಾತ್ರೆಯ ವೇಳೆ ನಡೆದ ಲಾಠಿ ಚಾರ್ಚ್ ಸಂದರ್ಭದಲ್ಲಿ ಉಪಸ್ಥಿತರಿದ್ದ, ಕೆಲ ಹಿಂದೂ ಕಾರ್ಯಕರ್ತರ ಮೇಲೆ ವಿನಾ ಕಾರಣ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸುಬ್ರಹ್ಮಣ್ಯ ಠಾಣೆ ಪಿಎಸೈ ಜಂಬು ರಾಜ್ ಹಾಗೂ ಬೆಳ್ಳಾರೆ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದರು.

ಕೇರಳ ರಾಜ್ಯದ ಕಾಸರಗೋಡಿನ ಹಿರಿಯ ಅರ್ ಎಸ್ ಎಸ್ ಸ್ವಯಂ ಸೇವಕ ರಮೇಶ್ ಎಂಬವರು ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ತಪ್ಪಿಸಲು ಹೋದಾಗ ಅವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಈ ಲಾಠಿ ಚಾರ್ಜ್ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಲಾಠಿಚಾರ್ಜ್ ಮಾಡಿದ ಇವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜನಪ್ರತಿನಿಧಿಗಳನ್ನು ಕಾರ್ಯಕರ್ತರು ಒತ್ತಾಯಿಸಿದ್ದರು. ಇದಾದ ಎರಡೇ ದಿನದಲ್ಲಿ ಇವರಿಬ್ಬರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸೈ ಸುಹಾಸ್ ಆರ್ ಅವರನ್ನು ಬೆಳ್ಳಾರೆ ಠಾಣೆ ಪಿಎಸೈ ಆಗಿ
ಹಾಗೂ ವಿಟ್ಲ ಠಾಣೆ ಪಿಎಸೈ ಮಂಜುನಾಥ ಟಿ ಅವರನ್ನು ಸುಬ್ರಹ್ಮಣ್ಯ ಠಾಣೆ ಪಿಎಸೈ ಆಗಿ ವರ್ಗಾವಣೆಗೊಳಿಸಿ ಪಶ್ಚಿಮ
ವಲಯ ಪೊಲೀಸ್ ಮಹಾ ನಿರೀಕ್ಷಕರಾದ ದೇವ ಜ್ಯೋತಿ ರೇ ಆದೇಶಿಸಿದ್ದಾರೆ

ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರು ಈ ಪಿಎಸ್‌ಐ ರವರುಗಳನ್ನು ಪ್ರಸ್ತುತ ಅವರು ಕರ್ತವ್ಯ ನಿರ್ವಹಿಸುತ್ತಿರುವ
ಸ್ಥಳದಿಂದ ಕೂಡಲೇ ಯಾವುದೇ ಕಾಲವನ್ನು ಉಪಯೋಗಿಸಿಕೊಳ್ಳದೇ ವರ್ಗಾವಣೆ ಮಾಡಲಾದ ಸ್ಥಳದಲ್ಲಿ ಕರ್ತವ್ಯಕ್ಕೆ
ವರದಿ ಮಾಡಿಕೊಳ್ಳುವಂತೆ ಸೂಚಿಸಿ ಬಿಡುಗಡೆಗೊಳಿಸಬೇಕು. ಅವರನ್ನು ಬಿಡುಗಡೆ ಮಾಡಿದ ಹಾಗೂ
ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನಾಂಕದ ಬಗ್ಗೆ ಈ ಕಛೇರಿಗೆ ಮಾಹಿತಿ ನೀಡುವುದು. ಮೇಲ್ಕಂಡ ಪಿಎಸ್‌ಐ ರವರ
ವರ್ಗಾವಣೆ ಆದೇಶದಿಂದಾಗಿ ಸ್ಥಳ ನಿಯುಕ್ತಿಗೊಳ್ಳಲು ಬಾಕಿಯಾಗುವ ಪಿಎಸ್‌ಐ ರವರನ್ನು ಮುಂದಿನ ಸ್ಥಳ
ನಿಯುಕ್ತಿಗಾಗಿ ಪ.ವ. ಕಛೇರಿಯಲ್ಲಿ ವರದಿ ಮಾಡುವಂತೆ ಸೂಚಿಸಿ ಕಳುಹಿಸುವುದು ಎಂದು ಆದೇಶ ಪತ್ರದಲ್ಲಿ
ತಿಳಿಸಲಾಗಿದೆ

ಇನ್ನು ಬೆಳ್ಳಾರೆ ಠಾಣೆಯಲ್ಲಿ ಹೆಡ್ ಕಾನ್ಸೆಟೇಬಲ್ ಆಗಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಅವರನ್ನು ಮಂಗಳೂರಿನ ಡಿಎಸ್ ಬಿ ಕಛೇರಿಗೆ ವರ್ಗಯಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!