Wednesday, July 2, 2025
Homeತಾಜಾ ಸುದ್ದಿಮಂಗಳೂರು: ಬೃಹತ್‌ ಬ್ಯಾನರ್ ಬಿದ್ದು ಮೂರು ಕಾರುಗಳಿಗೆ ಹಾನಿ

ಮಂಗಳೂರು: ಬೃಹತ್‌ ಬ್ಯಾನರ್ ಬಿದ್ದು ಮೂರು ಕಾರುಗಳಿಗೆ ಹಾನಿ

spot_img
- Advertisement -
- Advertisement -

ಮಂಗಳೂರು: ಏಕಾಏಕಿ ಬೃಹತ್ ಬ್ಯಾನರ್ ಬಿದ್ದು, ಪಾರ್ಕಿಂಗ್ ಮಾಡಿದ್ದ ಮೂರು ಕಾರುಗಳಿಗೆ ಹಾನಿಯಾಗಿರುವ ಘಟನೆ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ. ಬಳಿಕ ಅಗ್ನಿಶಾಮಕ ದಳದವರು ಬಂದು ಕಾರನ್ನು ಬ್ಯಾನರ್ ನಡಿಯಿಂದ ತೆರವು ಮಾಡಿದ್ದಾರೆ.

ನಗರದ ಟೌನ್ ಹಾಲ್ ನಲ್ಲಿ ಇದೇ 27 ರಿಂ 30ರವರೆಗೆ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ‌. ಇದರ ಬೃಹತ್ ಬ್ಯಾನರ್ ಅನ್ನು ಟೌನ್ ಹಾಲ್ ಗೇಟ್ ಬಳಿ ಹಾಕಲಾಗಿತ್ತು. ಆದರೆ ಈ ಬ್ಯಾನರ್ ಮಧ್ಯಾಹ್ನ 1.45ರ ಸುಮಾರಿಗೆ  ಪಾರ್ಕಿಂಗ್ ಮಾಡಿದ್ದ ಮೂರು ಕಾರುಗಳ ಮೇಲೆಯೇ ಬಿದ್ದಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಕಾರನ್ನು ಬ್ಯಾನರ್ ನಡಿಯಿಂದ ತೆರವು ಮಾಡಿದ್ದಾರೆ.

ಬ್ಯಾನರ್ ಬಿದ್ದಿರುವುದರಿಂದ ಮೂರು ಕಾರುಗಳಿಗೆ ಸ್ಕ್ರ್ಯಾಚಸ್ ಗಳಾಗಿ ಸಣ್ಣ ಮಟ್ಟದ ಹಾನಿಯಾಗಿದೆ. ಸ್ವಲ್ಪ ಕಾಲ ಸ್ಥಳದಲ್ಲಿ ರಸ್ತೆಸಂಚಾರ ಅಸ್ತವ್ಯಸ್ತವಾಗಿತ್ತು. ಅದೃಷ್ಟವಶಾತ್ ಬ್ಯಾನರ್ ನಡಿ ಯಾರೂ ಇರದ ಹಿನ್ನೆಲೆಯಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ತಕ್ಷಣ ಬ್ಯಾನರ್ ತೆರವು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.

- Advertisement -
spot_img

Latest News

error: Content is protected !!