Friday, July 3, 2026
Homeತಾಜಾ ಸುದ್ದಿಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಭೂಗತಪಾತಕಿ ರವಿ ಪೂಜಾರಿ ಖುಲಾಸೆ

ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣ: ಸಾಕ್ಷ್ಯಾಧಾರ ಕೊರತೆಯಿಂದ ಭೂಗತಪಾತಕಿ ರವಿ ಪೂಜಾರಿ ಖುಲಾಸೆ

- Advertisement -
- Advertisement -

ಬೆಂಗಳೂರು:ಇಪ್ಪತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಭೂಗತಪಾತಕಿ ರವಿ ಪೂಜಾರಿ ಖುಲಾಸೆಗೊಂಡಿದ್ದಾರೆ. 2001ರಲ್ಲಿ ಬೆಂಗಳೂರಿನ ಸುಬ್ಬರಾಜು ಎಂಬ ಬಿಲ್ಡರ್ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದರು. ಇದೀಗ ವಿಶೇಷ ನ್ಯಾಯಾಲಯವೊಂದು ಸಾಕ್ಷ್ಯಾಧಾರ ಕೊರತೆಯಿಂದ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

2001ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಸುಬ್ಬರಾಜು ಎಂಬ ಬಿಲ್ಡರ್ ಕೊಲೆಯಾಗಿತ್ತು. ಪ್ರಕರಣದಲ್ಲಿ ರವಿ ಪೂಜಾರಿ ಕೂಡ ಆರೋಪಿಯಾಗಿದ್ದ, ಮುತ್ತಪ್ಪ ರೈ ಅಣತಿಯಂತೆ ರವಿ ಪೂಜಾರಿ ತನ್ನ ಬಂಟರಾದ ಯೂಸುಫ್ ಬಚಖಾನ್ ಮೂಲಕ ಕೃತ್ಯ ಮಾಡಿಸಿದ್ದ. ಪ್ರಕರಣದಲ್ಲಿ ಮುತ್ತಪ್ಪ ರೈ ಮೇಲಿನ ಆರೋಪ ಮೊದಲೇ ಖುಲಾಸೆಯಾಗಿತ್ತು. ಎರಡು ವರ್ಷಗಳ ಹಿಂದೆ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದ ರವಿ ಪೂಜಾರಿಯನ್ನು ಕೊಲೆ ಪ್ರಕರಣದಲ್ಲಿ ಕೋರ್ಟಿಗೆ ಹಾಜರು ಮಾಡಲಾಗಿತ್ತು. ಆದರೆ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.

- Advertisement -

Latest News

error: Content is protected !!