Sunday, June 7, 2026
Homeಕರಾವಳಿಮಂಗಳೂರು: ಮಂಗಳೂರಿನಲ್ಲಿ ಮಳೆ ನಿಂತರೂ ನಿಲ್ಲದ ಭಾರೀ ಕಡಲ್ಕೊರೆತ

ಮಂಗಳೂರು: ಮಂಗಳೂರಿನಲ್ಲಿ ಮಳೆ ನಿಂತರೂ ನಿಲ್ಲದ ಭಾರೀ ಕಡಲ್ಕೊರೆತ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಕುಂಭ ಧ್ರೋಣ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ, ಇನ್ನು ಸದ್ಯ ಮಳೆ ನಿಂತರೂ ಮಂಗಳೂರಿನಲ್ಲಿ ಕಡಲ್ಕೊರೆತ ಮಾತ್ರ ನಿಂತಿಲ್ಲ.

ಉಚ್ಚಿಲ, ಬಟ್ಟಪಾಡಿ, ಉಳ್ಳಾಲ ಕಡಲ ತೀರದಲ್ಲಿ ಭಾರೀ ಅಲೆಗಳ ಅಬ್ಬರ ಭಾರೀ ಜೋರಾಗಿದೆ. ಬಟ್ಟಪಾಡಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಸಮುದ್ರಪಾಲಾಗಿದೆ. ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಪರ್ಕವಿಲ್ಲದೆ ಬಟ್ಟಪಾಡಿ ಗ್ರಾಮ ದ್ವೀಪದಂತಾಗಿದೆ. ರಸ್ತೆ ‌ಸಂಪರ್ಕವಿಲ್ಲದೇ ಸುಮಾರು 30ಕ್ಕೂ ಅಧಿಕ‌ ಮನೆಗಳ ನಿವಾಸಿಗಳು ಪರದಾಡುತ್ತಿದ್ದಾರೆ.

ಸಮುದ್ರ ಸಮೀಪದ ಮನೆಗಳಿಗೆ ಭಾರೀ ಗಾತ್ರದ ಅಲೆಗಳು ಬಡಿಯುತ್ತಿದ್ದು, ಉಚ್ಚಿಲದ ಕೆಲ ಖಾಸಗಿ ಬೀಚ್ ರೆಸಾರ್ಟ್ ಗಳ ತಡೆಗೋಡೆ ನೀರುಪಾಲಾಗಿದೆ.

- Advertisement -

Latest News

error: Content is protected !!