- Advertisement -
![]()
- Advertisement -
ಶೃಂಗೇರಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ರಸ್ತೆ ಬದಿಯಲ್ಲಿ ಮಣ್ಣು ಕುಸಿತವಾಗಿದೆ.
ಶೃಂಗೇರಿ ಸಮೀಪದ ಕೆರೆ ಕಟ್ಟೆ ಬಳಿ ರಸ್ತೆಗೆ ಮಣ್ಣು ಕುಸಿದಿದ್ದು, ಶೃಂಗೇರಿ – ಮಂಗಳೂರು ಸಂಪರ್ಕಿಸುವ ಹೆದ್ದಾರಿ ಸಂಚಾರ ಬಂದ್ ಆಗಿದೆ.ಇದೇ ವೇಳೆ, ಶೃಂಗೇರಿ ಶಾರದಾ ಮಠದ ಸಮೀಪ ತುಂಗಾ ನದಿಯಲ್ಲಿ ನೀರು ಏರಿಕೆಯಾಗಿದ್ದು, ನೆರೆ ಆತಂಕ ಎದುರಾಗಿದೆ.
ಇನ್ನು ರಾತ್ರಿ ವೇಳೆಯಲ್ಲಿ ಮಳೆ ಹೆಚ್ಚಾದರೆ ಶೃಂಗೇರಿ ಮಠದ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗುವ ಸಾಧ್ಯತೆ ಇದೆ.
- Advertisement -


