Tuesday, June 23, 2026
Homeಅಪರಾಧಜಾಗ ಮಾರಾಟದ ಅಗ್ರಿಮೆಂಟ್ ಮಾಡಿ 45 ಲಕ್ಷ ವಂಚನೆ: ಬೆಳ್ತಂಗಡಿಯ ಪ್ರವೀಣ್ ಭಂಡಾರಿ ಮತ್ತು ಕಲ್ಮಂಜದ...

ಜಾಗ ಮಾರಾಟದ ಅಗ್ರಿಮೆಂಟ್ ಮಾಡಿ 45 ಲಕ್ಷ ವಂಚನೆ: ಬೆಳ್ತಂಗಡಿಯ ಪ್ರವೀಣ್ ಭಂಡಾರಿ ಮತ್ತು ಕಲ್ಮಂಜದ ಮಹಿಳೆ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ನಿವೇಶನ ಮಾರಾಟದ ಬಗ್ಗೆ ಅಗ್ರಿಮೆಂಟ್ ಮಾಡಿ ರೂ 45 ಲಕ್ಷ ಹಣ ಪಡೆದುಕೊಂಡು ವಂಚಿಸಿರುವ ಬಗ್ಗೆ ಬೆಳ್ತಂಗಡಿ ನಿವಾಸಿ ಪ್ರವೀಣ್ ಭಂಡಾರಿ ಹಾಗೂ ಕಲ್ಮಂಜದ ಮಹಿಳೆ ವಿರುದ್ದ ಬೆಳ್ತಂಗಡಿ ನಿವಾಸಿ ವಿಶ್ವನಾಥ ರೈ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ವಿಶ್ವನಾಥ್ ರೈ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಲ್ಲಿ ಆರೋಪಿ ಪ್ರವೀಣ್ ಭಂಡಾರಿ ಎಂಬಾತನು ಕಲ್ಮಂಜದ ಮಹಿಳೆಯಿಂದ ಒಟ್ಟು 40 ಸೆನ್ಸ್ ಜಾಗವನ್ನು ಖರೀದಿ ಮಾಡಿ ಬಳಿಕ ಅದನ್ನು ವಿಶ್ವನಾಥ ರೈ ಅವರಿಗೆ ಮಾರಾಟ ಮಾಡುವುದಾಗಿ ಹೇಳಿ ರೂ 45 ಲಕ್ಷ ಹಣವನ್ನು ಪಡೆದುಕೊಂಡು ಮೂರು ತಿಂಗಳ ಒಳಗೆ ದಾಖಲೆಗಳನ್ನು ಸರಿಪಡಿಸಿ ಬರೆದು ಕೊಡುವುದಾಗಿ 9/1/24 ರಂದು ನೊಂದಾಯಿತ ಕರಾರುಪತ್ರ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಜಾಗವನ್ನು ಕ್ರಯಸಾಧನ ಮಾಡಿಕೊಡದೆ ಪಡೆದ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ.

ಅಲ್ಲದೆ ಎರಡನೆ ಆಪಾದಿತರಲ್ಲಿ ಈ ಹಿಂದೆ ಮಾಡಿಕೊಂಡಿದ್ದ ಮಾರಾಟ ಕ್ರಯ ಸಾಧನವನ್ನು ರದ್ದು ಪಡಿಸಿದ್ದಾರೆ.ಈ ಮೂಲಕ ಪಡೆದ ಹಣವನ್ನು ಹಿಂತಿರುಗಿಸದೆ ಜಾಗವನ್ನೂ ನೀಡಿದೆ ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಭಂಡಾರಿ ಮತ್ತು ಕಲ್ಮಂಜದ ಮಹಿಳೆ ವಿರುದ್ಧ ಸೆ. 20ರಂದು ಬಿಎನ್.ಎಸ್.u/s 316(2),318(4)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!