Thursday, June 4, 2026
Homeಕರಾವಳಿಉಪ್ಪಿನಂಗಡಿ : ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧರೊಬ್ಬರ ಕೈಯಲ್ಲಿದ್ದ ಹಣದ ಚೀಲ ಎಗರಿಸಲು ಯತ್ನಿಸಿದ ಮಹಿಳೆ

ಉಪ್ಪಿನಂಗಡಿ : ಗ್ರಾಹಕರ ಸೋಗಿನಲ್ಲಿ ಬಂದು ವೃದ್ಧರೊಬ್ಬರ ಕೈಯಲ್ಲಿದ್ದ ಹಣದ ಚೀಲ ಎಗರಿಸಲು ಯತ್ನಿಸಿದ ಮಹಿಳೆ

- Advertisement -
- Advertisement -

ಉಪ್ಪಿನಂಗಡಿ : ವೃದ್ದರೊಬ್ಬರ ಕೈಯಲ್ಲಿದ್ದ ಹಣವಿದ್ದ ಚೀಲವನ್ನು ಮಹಿಳೆಯೊಬ್ಬಳು ಎಗರಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ವೃದ್ದರೊಬ್ಬರ ಕೈಯಲ್ಲಿದ್ದ ಹಣವಿದ್ದ ಚೀಲವನ್ನೇ ರಾಜಾರೋಷವಾಗಿ ಎಳೆಯಲು ಯತ್ನಿಸಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅಂಗಡಿಯೊಂದರಲ್ಲಿ  ಅಡಿಕೆ ಮಾರಾಟ ಮಾಡಿ ದೊರೆತ ಹಣದೊಂದಿಗೆ ಹಿಂತಿರುಗುತ್ತಿದ್ದ ವೃದ್ದರೊಬ್ಬರ ಹಿಂದೆ  ಮುಂದೆ ನಿಂತು ಹೊಂಚು ಹಾಕುತ್ತಿದ್ದ ಮಹಿಳೆಯರಿಬ್ಬರ ಪೈಕಿ ಹಿಂಬದಿ ಇದ್ದಾಕೆ ವೃದ್ದರ ಕೈಯಲ್ಲಿದ್ದ ಚೀಲವನ್ನು ಎಳೆಯುತ್ತಿದ್ದಂತೆಯೇ ಜಾಗೃತಗೊಂಡ ವೃದ್ಧ ಚೀಲವನ್ನು ಬಲವಾಗಿ ಹಿಡಿದುಕೊಂಡಿದ್ದಾರೆ.

ಚೀಲವನ್ನು ಎಳೆದಿರುವುದು ಗೊತ್ತಾಗುತ್ತಿದ್ದಂತೆ   ಬೇರೊಂದು ವಿಚಾರದ ಬಗ್ಗೆ ಗಮನ ಸೆಳೆದವರಂತೆ ವರ್ತಿಸಿ ಮಹಿಳೆಯರಿಬ್ಬರೂ  ಸ್ಥಳದಿಂದ ನಿರ್ಗಮಿಸುತ್ತಿರುವುದು ಸ್ಥಳದಲ್ಲಿನ ಸಿಸಿ ಕ್ಯಾಮರಾದದಲ್ಲಿನ ದೃಶ್ಯಾವಳಿಯಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೀಗ ಮಹಿಳೆಯರ ಪತ್ತೆಗಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!