Tuesday, April 30, 2024
Homeತಾಜಾ ಸುದ್ದಿಚಿಕ್ಕಮ್ಮನ ಮನೆಗೆ ಬಂದು ಕೊರೊನಾ ಲಸಿಕೆ ಕೊಟ್ಟ ಯುವತಿ: ವ್ಯಾಕ್ಸಿನ್ ಪಡೆದ ಕೆಲವೇ ಹೊತ್ತಲ್ಲಿ ಚಿನ್ನಾಭರಣ...

ಚಿಕ್ಕಮ್ಮನ ಮನೆಗೆ ಬಂದು ಕೊರೊನಾ ಲಸಿಕೆ ಕೊಟ್ಟ ಯುವತಿ: ವ್ಯಾಕ್ಸಿನ್ ಪಡೆದ ಕೆಲವೇ ಹೊತ್ತಲ್ಲಿ ಚಿನ್ನಾಭರಣ ಮಂಗಮಾಯ

spot_img
- Advertisement -
- Advertisement -

ಚೆನ್ನೈ:  ಚಿಕ್ಕಮ್ಮನ ಮನೆಗೆ ಬಂದ ಅಕ್ಕನ ಮಗಳು ಕೊರೊನಾ ಲಸಿಕೆ ಎಂದು ಎಲ್ಲರಿಗೂ ಇಂಜೆಕ್ಷನ್ ಕೊಟ್ಟು ಚಿನ್ನಾಭರಣ ದೋಚಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ರಾಸತಿ ಎಂಬ ಮಹಿಳೆ ಮನೆಗೆ  ಕಳೆದ ಗುರುವಾರ  ಗುರುವಾರದಂದು ಆಕೆಯ ಅಕ್ಕನ ಮಗಳು ಸತ್ಯಪ್ರಿಯಾ (26) ಎಂಬ ಯುವತಿ ಬಂದಿದ್ದಳು. ಚಿಕ್ಕಮ್ಮ ಎಂದು ಪ್ರೀತಿಯಿಂದ ಕರೆಯುತ್ತ ಬಂದ ಮಗಳನ್ನು ರಾಸತಿ ಪ್ರೀತಿಯಿಂದ ಆರೈಕೆ ಮಾಡಲಾರಂಭಿಸಿದಳು. ಅವಳ ಜತೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಕೂಡ ಆಕೆಯನ್ನು ಆರೈಕೆ ಮಾಡಿದ್ದಾರೆ. ಈ ಮಧ್ಯೆ ಸತ್ಯಪ್ರಿಯಾ ಕೊರೊನಾ ಲಸಿಕೆ ತಂದಿರುವುದಾಗಿ ಹೇಳಿದ್ದಾಳೆ. ನೀವು ನಾಲ್ವರೂ ಕರೊನಾ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಎಲ್ಲರಿಗೂ ಲಸಿಕೆ ಕೊಟ್ಟಿದ್ದಾಳೆ.

ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ ನಾಲ್ವರು ಎಚ್ಚರ ತಪ್ಪಿ ಬಿದ್ದಿದ್ದಾರೆ. ಅದಾದ ಮೇಲೆ ಸತ್ಯಪ್ರಿಯಾ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಶುಕ್ರವಾರದಂದು ಎಚ್ಚರವಾದಾಗ ಚಿಕ್ಕಮ್ಮನ ಕುಟುಂಬಕ್ಕೆ ಶಾಕ್​ ಆಗಿದೆ. ಲಸಿಕೆ ಹೆಸರಿನಲ್ಲಿ ಮೂರ್ಚೆ ಬರುವ ಮದ್ದು ಕೊಟ್ಟು ತಮ್ಮನ್ನು ಮೋಸ ಮಾಡಲಾಗಿದೆ ಎನ್ನುವುದು ಅವರಿಗೆ ಅರಿವಾಗಿದೆ.

ಪೊಲೀಸ್​ ಠಾಣೆಯಲ್ಲಿ ಸತ್ಯಪ್ರಿಯಾ ವಿರುದ್ಧ ದೂರು ನೀಡಲಾಗಿದೆ. ಯುವತಿಯನ್ನು ಹಿಡಿದ ಪೊಲೀಸರು ಆಕೆಯ ಬಾಯಿಯಿಂದ ಸತ್ಯವನ್ನು ಹೊರಡಿಸಿದ್ದಾರೆ. ತಪ್ಪೊಪ್ಪಿಕೊಂಡಿರುವ ಆಕೆ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾಳೆ.

- Advertisement -
spot_img

Latest News

error: Content is protected !!