Thursday, July 16, 2026
Homeಕರಾವಳಿಮಂಗಳೂರುಸುಳ್ಯ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

ಸುಳ್ಯ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

- Advertisement -
- Advertisement -

ಸುಳ್ಯ: ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿರು ಘಟನೆ ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ.  ಆಲೆಟ್ಟಿ ಗ್ರಾಮದ ಪರಿವಾರಕಾನ ನಿವಾಸಿ ನಂದಿನಿ (27) ಯವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾದ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. 

ಪತಿ ರಾಜೇಂದ್ರ (40) ಟೈಲ್ಸ್ ಕೆಲಸ ಮಾಡುವವರಾಗಿದ್ದು ಪರಿವಾರಕಾನದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಮಕ್ಕಳು ವೈಷ್ಣವಿ (8 ವರ್ಷ) ಸೆಂಟ್‌ ಜೋಸೆಪ್‌ ಶಾಲೆ 2ನೇ ತರಗತಿ ವಿದ್ಯಾರ್ಥಿನಿ. ಇನ್ನೊಬ್ಬಾಕೆ 2 ವರ್ಷ ಪ್ರಾಯದ ಅನುಷ್ಕಾ ಅಂಗನವಾಡಿಗೆ ಹೋಗುತ್ತಿದ್ದಳು. ಕಳೆದ ಒಂದು ವಾರದ ಹಿಂದೆ ಗಂಡನು ತನ್ನ ಮೊಬೈಲ್‌ನಲ್ಲಿ ಯಾವಾಗಲು ರೀಲ್ಸ್ ನೋಡಿಕೊಂಡು ಕುಳಿತುಕೊಂಡಿರುವ ವಿಚಾರವಾಗಿ ಜಗಳವಾಗಿ ತನ್ನ ತವರು ಮನೆಗೆ ಮಕ್ಕಳೊಂದಿಗೆ ಹೋಗಿ ಬಂದಿದ್ದರು. ಇದೀಗ ಜ. 7 ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ನಡುವೆ ತನ್ನ ಮನೆಯಿಂದ ತನ್ನ ಮಕ್ಕಳೊಂದಿಗೆ ಕಾಣೆಯಾಗಿರುವುದಾಗಿ ರಾಜೇಂದ್ರ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!