Thursday, June 4, 2026
Homeಕರಾವಳಿನೆಲ್ಯಾಡಿಯ ರೆಖ್ಯಾದಲ್ಲಿ ಸೊಪ್ಪು ತರಲು ಹೋದ ಮಹಿಳೆ ನಾಪತ್ತೆ : ಮನೆಯ ಸಮೀಪದ ಹೊಳೆಗೆ ಹಾರಿರುವ...

ನೆಲ್ಯಾಡಿಯ ರೆಖ್ಯಾದಲ್ಲಿ ಸೊಪ್ಪು ತರಲು ಹೋದ ಮಹಿಳೆ ನಾಪತ್ತೆ : ಮನೆಯ ಸಮೀಪದ ಹೊಳೆಗೆ ಹಾರಿರುವ ಶಂಕೆ

- Advertisement -
- Advertisement -

ಕಡಬ: ಸೊಪ್ಪು ತರಲೆಂದು ತೆರಳಿದ ಮಹಿಳೆಯೋರ್ವರು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ನೇಲ್ಯಡ್ಕ‌ ಸಮೀಪದ ಉರ್ನಡ್ಕ ನಿವಾಸಿ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ನಾಪತ್ತೆಯಾದ ಮಹಿಳೆ. ಶಕುಂತಲಾ ಅವರು ಇಂದು ಬೆಳಗ್ಗೆ ಸೊಪ್ಪು ತರಲೆಂದು ಮನೆಯಿಂದ ತೆರಳಿದ್ದಾರೆ. ಮನೆಯ ಪಕ್ಕದಲ್ಲಿ ಗುಂಡ್ಯ ಹೊಳೆಯ ಸಮೀಪ ಅವರ ಚಪ್ಪಲಿ ದೊರೆತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಇನ್ನು ಕೆಲವು ಗಂಟೆಗಳ ಮೊದಲು ಶಕುಂತಲಾ ಅವರು  ಹಿರಿಯ ಮಗನಿಗೆ ಕರೆ ಮಾಡಿದ್ದಾರೆ ಎನ್ನಲಾಗಿದ್ದು, ಆ ನಂತರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!