Thursday, May 2, 2024
Homeಕರಾವಳಿಉಡುಪಿಉಡುಪಿ;OLX ನಲ್ಲಿ ವಸ್ತು ಮಾರಾಟ ಮಾಡಲು ಹೋಗಿ ತಾನೇ ಹಣ ಕಳೆದುಕೊಂಡ ಮಹಿಳೆ

ಉಡುಪಿ;OLX ನಲ್ಲಿ ವಸ್ತು ಮಾರಾಟ ಮಾಡಲು ಹೋಗಿ ತಾನೇ ಹಣ ಕಳೆದುಕೊಂಡ ಮಹಿಳೆ

spot_img
- Advertisement -
- Advertisement -

ಉಡುಪಿ;OLX ನಲ್ಲಿ ವಸ್ತು ಮಾರಾಟ ಮಾಡಲು ಹೋಗಿ ಮಹಿಳೆಯೊಬ್ಬರು ತಾನೇ ಲಕ್ಷಾಂತರ ರೂಪಾಯಿ  ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಉಷಾ ಎಂಬ ಮಹಿಳೆ OLX ನಲ್ಲಿ ತಮ್ಮಲ್ಲಿದ್ದ ಸೊತ್ತುಗಳ ಮಾರಾಟದ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ವಂಚಕನೊಬ್ಬ ಮಹಿಳೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದ.ಬಳಿಕ ಮಹಿಳೆಯೊಬ್ಬಳು ಕರೆ ಮಾಡಿ ಉಷಾ ಕಿರಣ್ ಜತೆ ಮಾತನಾಡಿ ವಸ್ತುಗಳನ್ನು ಖರೀದಿಸುವುದಾಗಿ ತಿಳಿಸಿದ್ದಳು.

ತನ್ನಲ್ಲಿ ನಗದು ಹಣವಿಲ್ಲ ಗೂಗಲ್ ಪೇ ಮಾಡುವುದಾಗಿ ತಿಳಿಸಿ 2 ಗಂಟೆಯ ಬಳಿಕ ಮಹಿಳೆಯ ಮೊಬೈಲ್‌ಗೆ ಹಲವು ಕ್ಯೂಆರ್ ಕೋಡ್‌ಗಳನ್ನು ಕಳುಹಿಸಿದ್ದಾಳೆ.ಇದಾದ ಬಳಿಕ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ.

ಒಟ್ಟು ಬರೋಬ್ಬರಿ  1,28,496 ರೂ. ಮಹಿಳೆ ಕಳೆದುಕೊಂಡಿದ್ಎಂದುದು ತಿಳಿದುಬಂದಿದೆ. ಈ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!