Sunday, June 7, 2026
Homeತಾಜಾ ಸುದ್ದಿಹೆತ್ತ ಮಗುವನ್ನೇ ನಾಲ್ಕನೇ ಮಹಡಿಯಿಂದ ಎಸೆದು ಕೊಂದ ವೈದ್ಯೆ: ಬೆಂಗಳೂರಿನಲ್ಲಿ ಹೀಗೊಬ್ಬಳು ರಾಕ್ಷಸಿ ತಾಯಿ

ಹೆತ್ತ ಮಗುವನ್ನೇ ನಾಲ್ಕನೇ ಮಹಡಿಯಿಂದ ಎಸೆದು ಕೊಂದ ವೈದ್ಯೆ: ಬೆಂಗಳೂರಿನಲ್ಲಿ ಹೀಗೊಬ್ಬಳು ರಾಕ್ಷಸಿ ತಾಯಿ

- Advertisement -
- Advertisement -

ಬೆಂಗಳೂರು; ವೈದ್ಯೆಯೊಬ್ಬಳು ತನ್ನ ಐದು ವರ್ಷದ ಮಗಳನ್ನು ಬುದ್ಧಿಮಾಂದ್ಯೆ ಎಂಬ ನಾಲ್ಕನೇ ಮಹಡಿ ಯಿಂದ ಎಸೆದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಸಂಪಂಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ಸಿಕೆಎಸ್ ಗಾರ್ಡನ್, ಚೆನ್ನಮ್ಮ ಶಾಲೆ ಹಿಂಭಾಗದ ಅದ್ವಿತ್ ಅಪಾರ್ಟ್‍ಮೆಂಟ್‍ನ 4ನೇ ಮಹಡಿಯಲ್ಲಿ ದಂತ ವೈದ್ಯೆ ಡಾ.ಸುಷ್ಮಾ ಹಾಗೂ ಸಾಫ್ಟ್ ವೇರ್ ಎಂಜಿನಿಯರ್ ಕಿರಣ್ ದಂಪತಿ 5 ವರ್ಷದ ಧೃತಿ ಎಂಬ ಮಗಳೊಂದಿಗೆ ವಾಸವಾಗಿದ್ದಾರೆ. ಮಗು ಧೃತಿ ಬುದ್ದಿ ಮಾಂದ್ಯವಾಗಿದ್ದರಿಂದ ತಮ್ಮ ವೃತ್ತಿ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಎಂದು ಭಾವಿಸಿ ಸುಷ್ಮಾ ನಿನ್ನೆ ಸಂಜೆ 4ನೇ ಮಹಡಿಯಿಂದ ಮಗುವನ್ನು ಎಸೆದು, ನಂತರ ಮಹಡಿಯಿಂದ ತಾನೂ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕಾಪಾಡಿ ಎಂದು ಕೂಗಿಕೊಳ್ಳುತ್ತಿದ್ದ ಸುಷ್ಮಾರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಮಗು ಧೃತಿ ಸಾವನ್ನಪ್ಪಿದೆ. ಈ ಬಗ್ಗೆ ಸಂಪಂಗಿರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಷ್ಮಾಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!