Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ; ಅಪ್ಪ ಹಾಗೂ ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬಂಟ್ವಾಳ; ಅಪ್ಪ ಹಾಗೂ ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ; ಅಪ್ಪ ಹಾಗೂ ಮಗಳ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ನಿನ್ನೆ ನಡೆದಿದೆ.ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಪಾಡರ ಪತ್ನಿ ಯಶೋಧಾ(38) ಮೃತ ದುರ್ದೈವಿ. ಘಟನೆಯ ಕುರಿತು ಆಕೆಯ ಪುತ್ರಿ ಸಂಪ್ರೀತಾ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಯಶೋಧ ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ಯಶೋಧ ಅವರ ಗಂಡ 10 ವರ್ಷದ ಹಿಂದೆ ಬಿಟ್ಟು ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಎಂದಿನಂತೆ ಎದ್ದು, ಕೆ ಎಸ್ ಆರ್ ಟಿ ಸಿ ಬಿಜೈ ಬಸ್ ಸ್ಟಾಂಡ್ ಗೆ ಕೆಲಸಕ್ಕೆ ಹೋಗಿದ್ದಾರೆ. ಆದರೆ 9 ಗಂಟೆಗೆ ಮನೆಗೆ ಕರೆ ಮಾಡಿ “ನಾನು ಫರಂಗಿಪೇಟೆಯಲ್ಲಿದ್ದೇನೆ. ನನಗೆ ಬದುಕುವುದು ಇಷ್ಟವಿಲ್ಲ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.

ಕೂಡಲೇ ಪುತ್ರಿ ಹಾಗೂ ತಂದೆ ಬಾಲಕೃಷ್ಣ ಅವರ ರಿಕ್ಷಾದಲ್ಲಿ ಫರಂಗಿಪೇಟೆಗೆ ಬಂದಾಗ ಯಶೋಧಾ ಅವರು ನೇತ್ರಾವತಿ ನದಿ ಕಿನಾರೆಗೆ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದು, ಓಡಿ ಹೋಗಿ ನದಿ ಕಿನಾರೆ ಬಳಿ ಹಿಡಿದುಕೊಂಡಾಗ ಪುತ್ರಿ ಹಾಗೂ ತಂದೆಯಾ ಕೈಯನ್ನು ದೂಡಿ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!