Sunday, June 7, 2026
Homeಕರಾವಳಿ108 ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಕಡಬದ ಮಹಿಳೆ: ಸುರಕ್ಷಿತ ಹೆರಿಗೆ ಮಾಡಿಸಿದ ಸಿಬ್ಬಂದಿ...

108 ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಕಡಬದ ಮಹಿಳೆ: ಸುರಕ್ಷಿತ ಹೆರಿಗೆ ಮಾಡಿಸಿದ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

- Advertisement -
- Advertisement -

ಕಡಬ: ಹೆರಿಗೆಗೆಂದು ಮಹಿಳೆಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಎಡಮಂಗಲ ಡೆಕ್ಕಳ ನಿವಾಸಿ ಹರಿಪ್ರಸಾದ್ ಎಂಬವರ ಪತ್ನಿ ಹೇಮಲತಾ ಎಂಬಾಕೆ ಮೊದಲ ಹೆರಿಗೆಗೆಂದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದುದರಿಂದ ಪುತ್ತೂರು ಅಥವಾ ಸುಳ್ಯಕ್ಕೆ ಕರೆದೊಯ್ಯಲು ಸೂಚಿಸಿದ್ದಾರೆ. ಹಾಗಾಗಿ ಕಡಬದ 108 ಅಂಬ್ಯುಲೆನ್ಸ್ ಅವರನ್ನು ಸುಳ್ಯಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಐವರ್ನಾಡು ಸಮೀಪ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಇನ್ನು ಸುಸೂತ್ರ ಹೆರಿಗೆಯಾಗುವಲ್ಲಿ EMT ಪ್ರಜ್ಞಾ ಹಾಗೂ ಪೈಲಟ್ ರಾಜೇಶ್ ಸಹಕರಿಸಿದ್ದಾರೆ

- Advertisement -

Latest News

error: Content is protected !!