Thursday, May 16, 2024
Homeತಾಜಾ ಸುದ್ದಿರಾಹುಲ್‌ ಗಾಂಧಿಗಾಗಿ ತನ್ನ ನಾಲ್ಕು ಅಂತಸ್ತಿನ ಮನೆಯನ್ನೇ ಬರೆದುಕೊಟ್ಟ ಮಹಿಳೆ

ರಾಹುಲ್‌ ಗಾಂಧಿಗಾಗಿ ತನ್ನ ನಾಲ್ಕು ಅಂತಸ್ತಿನ ಮನೆಯನ್ನೇ ಬರೆದುಕೊಟ್ಟ ಮಹಿಳೆ

spot_img
- Advertisement -
- Advertisement -

 ನವದೆಹಲಿ; ಮಹಿಳೆಯೊಬ್ಬರು ರಾಹುಲ್ ಗಾಂಧಿ ತಮ್ಮ ನಾಲ್ಕು ಅಂತಸ್ತಿನ ಮನೆಯನ್ನು ಬರೆದು ಕೊಟ್ಟಿದ್ದಾರೆ.ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹರಾದ ಬಳಿಕ ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು.ಇದರ ಬೆನ್ನಲ್ಲೆ ರಾಹುಲ್ ಗಾಂಧಿಗೆ ಹಲವರು ಮನೆ ಕೊಡಲು ಮುಂದಾಗಿದ್ದಾರೆ.

ದೆಹಲಿ ಕಾಂಗ್ರೆಸ್ ಸೇವಾದಳದ ಅಧ್ಯಕ್ಷೆ ರಾಜಕುಮಾರಿ ಗುಪ್ತಾ ಅವರು ಮಂಗೋಲ್‌ಪುರಿ ಪ್ರದೇಶದಲ್ಲಿರುವ ತಮ್ಮ ನಾಲ್ಕು ಅಂತಸ್ತಿನ ಮನೆಯನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ನೀಡಲು ನಿರ್ಧರಿಸಿದ್ದಾರೆ.ಗುಪ್ತಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಮನೆಯನ್ನು ಖರೀದಿಸಿದ್ದರು ಎನ್ನಲಾಗಿದೆ.

ದೆಹಲಿ ಮಹಿಳಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷೆ ಶ್ರೀಮತಿ ರಾಜಕುಮಾರಿ ಗುಪ್ತಾ ಅವರು ಮಂಗೋಲ್ಪುರಿ ಪ್ರದೇಶದಲ್ಲಿನ ತನ್ನ ಮನೆಯನ್ನು ರಾಹುಲ್ ಗಾಂಧಿ ಅವರ ಹೆಸರಿಗೆ ವರ್ಗಾಯಿಸಿದ್ದಾರೆ.ಇದೇ ವೇಳೆ ಮಾತನಾಡಿದ ರಾಜಕುಮಾರಿ ಗುಪ್ತಾ, ರಾಹುಲ್ ಜಿ ಅವರನ್ನು ಮನೆಯಿಂದ ಓಡಿಸಬಹುದು, ಆದರೆ ಜನರ ಹೃದಯದಿಂದ ಅಲ್ಲ ಎಂದು ಹೇಳಿದರು. ಈ ಬಗ್ಗೆ ಕಾಂಗ್ರೆಸ್ ಸೇವಾದಳವು ಏಪ್ರಿಲ್ 1 ರಂದು ಹಿಂದಿಯಲ್ಲಿ ಟ್ವೀಟ್ ಮಾಡಿತ್ತು.

ರಾಹುಲ್ ಗಾಂಧಿಯ ಅನರ್ಹತೆ ಬಳಿಕ ಪ್ರಾರಂಭಿಸಿದ ‘ಮೇರಾ ಘರ್, ಆಪ್ಕಾ ಘರ್’ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಗಾಂಧಿ ಅವರ ಅನರ್ಹತೆಯ ವಿಷಯದ ಬಗ್ಗೆ ಪ್ರತಿಪಕ್ಷವು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದೆ. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುವ ಕ್ರಮ ಎಂದು ಬಣ್ಣಿಸಿದೆ.

- Advertisement -
spot_img

Latest News

error: Content is protected !!