Monday, June 8, 2026
Homeಕರಾವಳಿವಿಟ್ಲ; ಗಂಡನ ಮನೆಯವರಿಂದ ಹಲ್ಲೆ ಜೀವ ಬೆದರಿಕೆ ಆರೋಪ: ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ

ವಿಟ್ಲ; ಗಂಡನ ಮನೆಯವರಿಂದ ಹಲ್ಲೆ ಜೀವ ಬೆದರಿಕೆ ಆರೋಪ: ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ

- Advertisement -
- Advertisement -

ವಿಟ್ಲ:ಗಂಡನ ಮನೆಗೆ ಬಂದ ವೇಳೆ ಗಂಡನ ಮನೆಯವರು ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ  ಹಾಕಿದ್ದಾರೆಂದು  ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಮಂಜೊಟ್ಟಿ ನಿವಾಸಿ ಆಸೀಪ್ ರವರ ಪತ್ನಿ ಬೀಪಾತುಮ್ಮ ದೂರು ನೀಡಿದ ಮಹಿಳೆ.

ತನ್ನ ಮೊದಲ ಗಂಡ  ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ  ಅವರ ತಮ್ಮ ಆಸೀಫ್ ರವರು ನನ್ನನ್ನು ಎರಡನೇ ಮದುವೆಯಾಗಿದ್ದರು. ಮೊದಲನೆ ಗಂಡನ ಆಸ್ತಿಯನ್ನು ಆಸೀಫ್ ರವರು ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು ಅವರೇ ಖರ್ಚು ಮಾಡಿದ್ದಾರೆ. ಆ ಬಳಿಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು.  ಕಳೆದ 3 ತಿಂಗಳ ಹಿಂದೆ ಅವರು ವಿದೇಶಕ್ಕೆ ತೆರಳಿದ್ದಾರೆ.

ನನ್ನನ್ನು ಹಾಗೂ ಮಕ್ಕಳನ್ನು ಗಂಡನ ಮನೆಗೆ ಬಿಡಲೆಂದು ನನ್ನ ಅಣ್ಣಂದಿರು  ಬಂದ ವೇಳೆ ಮನೆಯಲ್ಲಿದ್ದ  ಆಸೀಫ್ ನ ಮನೆಯವರು ಸೇರಿಕೊಂಡು ನನ್ನನ್ನು ಮನೆಯ ಒಳಗೆ ಹೋಗದಂತೆ ತಡೆದು, ಮೈಗೆ ಕೈಹಾಕಿ ದೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಅತ್ತೆ  ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಇದಕ್ಕೆಲ್ಲಾ ಗಂಡ‌ನೇ  ಕಾರಣ ಎಂದು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಬೀಪಾತುಮ್ಮರವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

- Advertisement -

Latest News

error: Content is protected !!