Friday, March 29, 2024
Homeಕರಾವಳಿಕಾಸರಗೋಡುಮೊದಲ ಹೆರಿಗೆಯಲ್ಲೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕೇರಳದ ಮಹಿಳೆ..

ಮೊದಲ ಹೆರಿಗೆಯಲ್ಲೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಕೇರಳದ ಮಹಿಳೆ..

spot_img
- Advertisement -
- Advertisement -

ಕೇರಳ: ಮೊದಲ ಹೆರಿಗೆಯಲ್ಲೇ ಮಹಿಳೆಯೊಬ್ಬಳು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಕೇರಳದ ಪಾಲ್ ಕ್ಕಾಡ್ ನಲ್ಲಿ ನಡೆದಿದೆ.

ಪಾಲ್ ಕ್ಕಾಡ್​ನ ಛಲಾವರ ಮೂಲದ ದಂಪತಿ ಮುಸ್ತಾಫ ಮತ್ತು ಮುಬೀನಾ ನಾಲ್ಕು ಮುದ್ದಾದ ಗಂಡು ಮಕ್ಕಳ ಹೆತ್ತವರಾಗಿದ್ದಾರೆ.

ಮುಸ್ತಾಫ ದಂಪತಿ ಕಳೆದ ವರ್ಷ ಮದುವೆಯಾಗಿದ್ದರು. ಗರ್ಭಾವಸ್ಥೆಯ ಆರಂಭದಲ್ಲೇ ಮಬೀನಾ ನಾಲ್ಕು ಮಕ್ಕಳ ತಾಯಿ ಆಗಲಿದ್ದಾರೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಪೆರಿಂಥಲ್​ಮನ್ನದ ಮೌಲಾನಾ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಅಬ್ದುಲ್​ ವಾಹಾಬ್​ ಅವರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು.

ಗರ್ಭಾವತಿಯಾಗಿ 8 ತಿಂಗಳು ಕಳೆದ ಬಳಿಕ ಸಿಸೇರಿಯನ್​ ಮೂಲಕ ನಾಲ್ಕು ಮಕ್ಕಳಿಗೆ ಮಬೀನಾ ಜನ್ಮ ನೀಡಿದ್ದಾರೆ. ಪ್ರತಿ ಮಗು 1100 ರಿಂದ 1600 ಗ್ರಾಂ ತೂಕವಿದೆ. ಸದ್ಯ ಮಕ್ಕಳಿಗೆ ನಿಯೋ ಬ್ಲೆಸ್ ವಿಭಾಗದಲ್ಲಿ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲ ಮಕ್ಕಳು ಸಹ ಆರೋಗ್ಯವಾಗಿದ್ದಾರೆಂದು ನಿಯೋ ಬ್ಲೆಸ್​ ವಿಭಾಗದ ಉಸ್ತುವಾರಿ ಡಾ. ಜಯಚಂದ್ರ ಅವರು ತಿಳಿಸಿದ್ದಾರೆ. 

- Advertisement -
spot_img

Latest News

error: Content is protected !!