Monday, April 29, 2024
Homeಕರಾವಳಿಪೇಸ್ಟ್ ರೂಪದಲ್ಲಿ ಗುದದ್ವಾರದಲ್ಲಿಟ್ಟು ಚಿನ್ನ ಕಳ್ಳಸಾಗಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೂವರು ಅರೆಸ್ಟ್

ಪೇಸ್ಟ್ ರೂಪದಲ್ಲಿ ಗುದದ್ವಾರದಲ್ಲಿಟ್ಟು ಚಿನ್ನ ಕಳ್ಳಸಾಗಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೂವರು ಅರೆಸ್ಟ್

spot_img
- Advertisement -
- Advertisement -

ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಚಿನ್ನ ಕಳ್ಳಸಾಗಣೆಯನ್ನ ಬಯಲು ಮಾಡಿದ್ದಾರೆ.

ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನ ಕಸ್ಟಮ್ಸ್​ನ ಡಿಆರ್​​ಐ ವಿಭಾಗದ ಅಧಿಕಾರಿಗಳು ಭೇದಿಸಿದ್ದಾರೆ. ಕೇರಳದ ಕಾಸರಗೂಡು ನಿವಾಸಿ ಅಬ್ದುಲ್ ರಶೀದ್ ಸೇರಿದಂತೆ ಎರಡು ಪ್ರಕರಣಗಳಿಂದ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.

ಮಂಗಳೂರು ವಿಮಾನ ಆಗಮಿಸಿದ್ದ ಇಂಡಿಯನ್ ಏರ್​ಲೈನ್ಸ್ ಹಾಗೂ ಸ್ಪೈಸ್ ಜೆಟ್ ವಿಮಾನಗಳ ಮೂಲಕ ಕಳ್ಳಸಾಗಾಣಿಕೆಗೆ ಯತ್ನಿಸಲಾಗಿದೆ. ಆರೋಪಿಗಳು ಚಿನ್ನದ ಪೇಸ್ಟನ್ನು ಉಂಡೆಗಳನ್ನಾಗಿಸಿ ಗುದದ್ವಾರದಲ್ಲಿ ಅಡಗಿಸಿ ಇಟ್ಟು ಕಳ್ಳ ಸಾಗಣೆಗೆ ಮುಂದಾಗಿದ್ದರು. ತಪಾಸಣೆ ವೇಳೆ ಈ ಕೃತ್ಯ ಬಯಲಾಗಿದೆ. ಪೇಸ್ಟ್ ರೂಪದಲ್ಲಿ ತರಲಾಗುತ್ತಿದ್ದ 90 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!