- Advertisement -
- Advertisement -
ಮೂಡಬಿದರೆ; ಬಸ್ ನಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮೂಡಬಿದರೆಯ ಮಾರೂರಿನಲ್ಲಿ ನಡೆದಿದೆ. ಮಾರೂರು ಕುಂಟೋಡಿ ನಿವಾಸಿ ನೀಲಮ್ಮ (66) ಮೃತ ಮಹಿಳೆ.
ನೀಲಮ್ಮ ಅವರು : ಆಸ್ಪತ್ರೆಗೆ ತೆರಳಲು ಮೊಮ್ಮಗನ ಜತೆ ಬಸ್ ಹತ್ತುತ್ತಿದ್ದರು. ಅವರು ಬಸ್ ಹತ್ತುವ ಮೊದಲೇ ನಿರ್ವಾಹಕ ರೈಟ್ ಎಂದಿದ್ದು ಚಾಲಕ ಬಸ್ ಚಲಾಯಿಸಿದ್ದರಿಂದ ನೀಲಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಈ ಬಗ್ಗೆ ನಿರ್ವಾಹಕ ಅಶೋಕ್ ಮತ್ತು ಚಾಲಕ ಪ್ರಸನ್ನ ಅವರನ್ನು ವಶಕ್ಕೆ ಪಡೆದುಕೊಂಡ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪ್ರಕರಣ ದಾಖಲಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ
- Advertisement -