- Advertisement -
- Advertisement -
ಉಡುಪಿ; ಬಿಜೆಪಿ ಟಿಕೆಟ್ ಗೆ ಏಳು ಕೋಟಿ ಡೀಲ್ ಪ್ರಕರಣ ಸಂಬಂಧಿಸಿದಂತೆ ಕಳೆದ ಏಳು ದಿನಗಳಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು ನಿನ್ನೆ ರಾತ್ರೋರಾತ್ರಿ ಉಡುಪಿಯ ಶ್ರೀಕೃಷ್ಣ ಮಠದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಕಳೆದ 7 ದಿನಗಳಿಂದ ಚೈತ್ರಾ ಎಲ್ಲಿ ಅಡಗಿ ಕುಳಿತಿದ್ದರು ಅನ್ನೋದು ಅಚ್ಚರಿ ಮೂಡಿಸಿದೆ. ಚೈತ್ರಾ ಕಾಂಗ್ರೆಸ್ ಮಾಧ್ಯಮ ವಕ್ತಾರೆಯ ಮನೆಯಲ್ಲಿ ಅವಿತು ಕುಳಿತಿದ್ದರು ಅನ್ನೋದು ವಿಚಾರಣೆ ವೇಳೆ ಗೊತ್ತಾಗಿದೆ. ಕಾಂಗ್ರೆಸ್ ನ ಮಾಧ್ಯಮ ವಕ್ತಾರೆ ಅಂಜುಮ್ ಉಡುಪಿಯ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಆಶ್ರಯ ನೀಡಿದ್ದರು. ಅಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಅವಿತು ಕುಳಿತಿದ್ದರು ಚೈತ್ರಾ ಕುಂದಾಪುರ.
ಇನ್ನು ಚೈತ್ರಾಗೆ ಆಶ್ರಯ ನೀಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಂಗೆ ಸಿಸಿಬಿ ನೋಟೀಸ್ ನೀಡಿದೆ.ತನಿಖೆಗೆ ಹಾಜರಾಗುವಂತೆ ಹೇಳಿದೆ.
- Advertisement -