Friday, May 3, 2024
Homeಕರಾವಳಿಮಂಗಳೂರಿನಲ್ಲಿ ಕಾಲೇಜು ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗೆ 2.34 ಲಕ್ಷ ರೂಪಾಯಿ ವಂಚಿಸಿದ ಮಹಿಳೆ

ಮಂಗಳೂರಿನಲ್ಲಿ ಕಾಲೇಜು ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗೆ 2.34 ಲಕ್ಷ ರೂಪಾಯಿ ವಂಚಿಸಿದ ಮಹಿಳೆ

spot_img
- Advertisement -
- Advertisement -

ಮಂಗಳೂರು:  ಕಾಲೇಜಿನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ತರಗತಿ ಶುಲ್ಕವೆಂದು ಹೇಳಿ ಮಹಿಳೆಯೋರ್ವರು ವಿದ್ಯಾರ್ಥಿಗೆ 2.34 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಜು.7ರಂದು ಬೆಳಗ್ಗೆ ಕರೆ ಮಾಡಿ ಮಾತನಾಡಿದ ಮಹಿಳೆಯೋರ್ವಳು, ತಾನು ಕಾಲೇಜಿನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದು, ನಿಮಗೆ ಒಂದು ಲಿಂಕ್ ಕಳುಹಿಸಲಾಗಿದ್ದು, ಅದನ್ನು ತೆರೆದು ಕಾಲೇಜು ಶುಲ್ಕ ಮತ್ತು ಡೆಪಾಸಿಟ್ ಮೊತ್ತವನ್ನು ಪಾವತಿಸಬೇಕು. ಇಲ್ಲವಾದರೆ ಹಾಲ್‌ ಟಿಕೆಟ್ ರದ್ದು ಮಾಡುವುದಾಗಿ ತಿಳಿಸಿ ಕರೆ ಕಟ್ ಮಾಡಿದ್ದಾರೆ.

ನಂತರ ಲಿಂಕ್‌ವೊಂದು ಎಸ್‌ಎಂಎಸ್ ಮೂಲಕ ವಿದ್ಯಾರ್ಥಿಗೆ ಬಂದಿದೆ. ಅದನ್ನು ತೆರೆದಾಗ ಕಾಲೇಜಿನ ವಿವರ ಭರ್ತಿ ಮಾಡಲು ಪಾಸ್‌ವರ್ಡ್, ಮೊಬೈಲ್ ಸಂಖ್ಯೆ ಮೊದಲಾದವುಗಳನ್ನು ನೀಡಲು ತಿಳಿಸಲಾಗಿತ್ತು. ಅಲ್ಲದೆ, ವಾಲೆಟ್ ಮೂಲಕ 200 ರೂ. ರೀಚಾರ್ಜ್ ಮಾಡುವಂತೆ ತಿಳಿಸಲಾಯಿತು. ಜು.8ರಂದು ಅದೇ ಮಹಿಳೆ ಮತ್ತೆ ಕರೆ ಮಾಡಿ ಹಣ ಪಾವತಿಸಲು ತಿಳಿಸಿದಳು. ಅದರಂತೆ ವಿದ್ಯಾರ್ಥಿ ತನ್ನ ಖಾತೆಯಿಂದ 74,126 ರೂ.ಗಳನ್ನು ವರ್ಗಾಯಿಸಿದ್ದಾನೆ.


ಮರುದಿನ ಮತ್ತೆ 60,000 ರೂ. ವರ್ಗಾಯಿಸಿದ. ಅನಂತರ ತನ್ನ ಖಾತೆಯಲ್ಲಿ ಹಣ ಇಲ್ಲದ ಕಾರಣ ತನ್ನ ಅಕ್ಕನ ಖಾತೆಯಿಂದ ಒಂದು ಲಕ್ಷ ರೂ. ವರ್ಗಾಯಿಸಿದ್ದಾನೆ. ಹೀಗೆ ಹಂತ ಹಂತವಾಗಿ ಮಹಿಳೆಯು ಒಟ್ಟು 2,34,326 ರೂ.ನ್ನು ವರ್ಗಾಯಿಸಿಕೊಂಡಿದ್ದಾಳೆ ಎಂದು ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!