Thursday, June 4, 2026
Homeಕರಾವಳಿಸುರತ್ಕಲ್ ನಲ್ಲಿ ಮಹಿಳೆ ನಾಪತ್ತೆ, ಹೊಳೆಗೆ ಹಾರಿರುವ ಶಂಕೆ

ಸುರತ್ಕಲ್ ನಲ್ಲಿ ಮಹಿಳೆ ನಾಪತ್ತೆ, ಹೊಳೆಗೆ ಹಾರಿರುವ ಶಂಕೆ

- Advertisement -
- Advertisement -

ಸುರತ್ಕಲ್: ಇಲ್ಲಿನ ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂಬ ವಿವಾಹಿತ ಮಹಿಳೆ ಸೋಮವಾರ ಮಧ್ಯಾಹ್ನದಿಂದ ಮನೆಯಿಂದ ನಾಪತ್ತೆಯಾಗಿದ್ದಾರೆ. ಇದೀಗ ಅವರು ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಮಹಿಳೆಯ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಪುಷ್ಪಾ ಮುಂಬಯಿಂದ ಆಗಮಿಸಿದ್ದರು ಎನ್ನಲಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆಯಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ ನಡೆಸಲು ಮುಂದಾಗಿದ್ದು ಮಳೆಯ ಅಬ್ಬರಕ್ಕೆ‌ ನದಿಯಲ್ಲಿ ಪ್ರವಾಹ ಹೆಚ್ಚಿರುವ ಪರಿಣಾಮ ಶೋಧ ನಡೆಸಲು ಅಡ್ಡಿಯಾಗಿದೆ.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!