Friday, April 19, 2024
Homeಕರಾವಳಿಉಡುಪಿಉಡುಪಿ ಹಾಗೂ ಮಂಗಳೂರಿನ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿದ ರಾಜ್ಯ ಸರ್ಕಾರ!

ಉಡುಪಿ ಹಾಗೂ ಮಂಗಳೂರಿನ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿದ ರಾಜ್ಯ ಸರ್ಕಾರ!

spot_img
- Advertisement -
- Advertisement -

ಉಡುಪಿ/ ಮಂಗಳೂರು:ಉಡುಪಿ ಮತ್ತು ದಕ್ಷಿಣ ಕನ್ನಡದ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಿ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತಾವಿತ ಕೇಂದ್ರಗಳಲ್ಲಿ ಕನಿಷ್ಠ 2 ಎಕ್ರೆ ಜಾಗವಿರಬೇಕೆಂಬ ನಿಯಮವಿದೆ. ಸಿದ್ದಾಪುರದ ಕೇಂದ್ರದಲ್ಲಿ 4.3 ಎಕ್ರೆ ಸ್ಥಳವಿದ್ದು, ಉಳಿದೆಡೆ 2 ಎಕ್ರೆಗಿಂತ ಹೆಚ್ಚಿಗೆ ಜಾಗವಿದೆ. ಮೇಲ್ದರ್ಜೆಗೇರಿಸಿದ ಬಳಿಕ ಇಬ್ಬರು ಎಂಬಿಬಿಎಸ್‌ ವೈದ್ಯರು, ಒಬ್ಬರು ಬಿಎಎಂಎಸ್‌ ವೈದ್ಯರು ಇರುತ್ತಾರೆ. ದಿನದ 24 ತಾಸು ಸೇವೆ ಲಭ್ಯವಾಗಲಿದ್ದು, ಇದನ್ನು ಮಾದರಿ ಆರೋಗ್ಯ ಕೇಂದ್ರವಾಗಿ ರೂಪಿಸುವುದು ಸರಕಾರದ ಉದ್ದೇಶ.

ಉಡುಪಿ ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐದನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಲಾಗಿದೆ.

ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಮತ್ತು ಯೋಗ ಪ್ರಸಾರದ ಮೂಲಕ ಸಮಗ್ರ ಕ್ಷೇಮ ಕೇಂದ್ರವಾಗಿ ರೂಪಿಸಲಾಗುತ್ತದೆ. ಹೆರಿಗೆ ಸೌಲಭ್ಯವೂ ಲಭ್ಯವಾಗಲಿದೆ. ಒಟ್ಟು 3 ಕೋ.ರೂ. ವೆಚ್ಚದಲ್ಲಿ ಆಸ್ಪತ್ರೆ, 2 ಕೋ.ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣವಾಗಲಿದ್ದು, ಸಿಬ್ಬಂದಿಗೆ ಅಲ್ಲೇ ವಸತಿ ಒದಗಿಸುವ ಮೂಲಕ ದಿನದ 24 ಗಂಟೆ ಸೇವೆಗೆ ಲಭ್ಯವಾಗಬೇಕೆಂಬುದು ಇದರ ಉದ್ದೇಶ.

5 ವರ್ಷಗಳಲ್ಲಿ ರಾಜ್ಯದ 250 ಪ್ರಾ. ಆ. ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ತಿಳಿಸಿದ್ದರು.

- Advertisement -
spot_img

Latest News

error: Content is protected !!