Friday, May 17, 2024
Homeಕರಾವಳಿಗೋಳಿತ್ತಡಿ: ಸ.ಹಿ.ಪ್ರಾ.ಶಾಲೆ ಶೌಚಾಲಯ ಕೊರತೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ..!

ಗೋಳಿತ್ತಡಿ: ಸ.ಹಿ.ಪ್ರಾ.ಶಾಲೆ ಶೌಚಾಲಯ ಕೊರತೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ..!

spot_img
- Advertisement -
- Advertisement -

ಗೋಳಿತ್ತಡಿ: ನೆಟ್ಟಣಿಗೆ ಮುಡ್ನೂರು ಗ್ರಾಮದ ಗೋಳಿತ್ತಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳ ಶೌಚಾಲಯ ತೀರಾ ಹದೆಗೆಟ್ಟಿದ್ದು ಹುಡುಗರು ಮೂತ್ರ ವಿಸರ್ಜನೆ ಮಾಡಲು ಪಕ್ಕದ ಬಯಲು ಪ್ರದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಯಲು ಮುಕ್ತ ಶೌಚಾಲಯ ಎಂದು ರಾಷ್ಟ್ರಾದ್ಯಂತ ಆಂದೋಲನ ನಡೆಯುತ್ತಿರುವಾಗ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಶಾಲೆಗಳಲ್ಲಿ ಶೌಚಾಲಯ ಇಲ್ಲದೆ ವಿಧ್ಯಾರ್ಥಿಗಳು ಬಯಲು ಪ್ರದೇಶವನ್ನು ಅವಲಂಬಿತರಾಗಿರುವುದು ದುರಂತವೇ ಸರಿ. ಇಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸದ್ರಿ ಶಾಲೆಯ ಅಕ್ಕಪಕ್ಕದಲ್ಲಿ ಮನೆಗಳು ಇರುವ ಕಾರಣ ವಿಧ್ಯಾರ್ಥಿಗಳು ಮೂತ್ರ ಮಾಡಲು ತುಂಬಾ ದೂರ ಹೋಗುತ್ತಿದ್ದಾರೆ. ಈ ಕಾರಣದಿಂದ ಶಾಲಾ ಬೆಲ್ ಹೊಡೆದ ಕೂಡಲೇ ತರಗತಿಗೆ ಹಾಜರಾಗುತ್ತಿಲ್ಲ ಎಂದು ಅಧ್ಯಾಪಕರು ಸಮಸ್ಯೆ ಹೇಳಿದ್ದು ಪಂಚಾಯತ್ ತುರ್ತು ನಿಧಿಯಿಂದ ಅನುದಾನ ನೀಡಲು ಮನವಿ ಮಾಡಿದೆ.

ಇಲಾಖೆಯು ಈ ಬಗ್ಗೆ ಮುತುವರ್ಜಿ ವಹಿಸಿ ಸದ್ರಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಬೇಕಾಗಿದೆ ಎಂದು ಸ್ಥಳಿಯರ ಬೇಡಿಕೆಯಾಗಿದೆ.

- Advertisement -
spot_img

Latest News

error: Content is protected !!