Friday, May 3, 2024
Homeಕರಾವಳಿಸುಳ್ಯ: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ರ್ಯಾಗಿಂಗ್ ಪ್ರಕರಣ; ಕಾಲೇಜು ಪ್ರಾಶುಂಪಾಲರಿಂದ ಘಟನೆ ಬಗ್ಗೆ...

ಸುಳ್ಯ: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ರ್ಯಾಗಿಂಗ್ ಪ್ರಕರಣ; ಕಾಲೇಜು ಪ್ರಾಶುಂಪಾಲರಿಂದ ಘಟನೆ ಬಗ್ಗೆ ಸ್ಪಷ್ಟನೆ

spot_img
- Advertisement -
- Advertisement -

ಸುಳ್ಯ: ಕೆವಿಜಿ ಕಾಲೇಜಿನಲ್ಲಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಮೇಲೆ ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 21 ರಂದು ಕಾಲೇಜು ಕ್ಯಾಂಪಸ್ ಹೊರಗಡೆ ವಿದ್ಯಾರ್ಥಿನಿ ಡಾ.ಪಲ್ಲವಿ ಮೇಲೆ ಹಲ್ಲೆಯಾಗಿರುವ ವಿಚಾರ ತಿಳಿದು ಬಂದಿದೆ. ಸ್ವತಹ ಪಲ್ಲವಿ ಅವರೇ ಈ ವಿಚಾರವನ್ನು ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜಿನ 6 ಪ್ರಾದ್ಯಾಪಕರ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ಆರೋಪಿ ಸ್ಥಾನದಲ್ಲಿರುವ ಡಾ.ವೈಶಾಖ್ ಪಣಿಕರ್ ಮತ್ತು ಡಾ.ಹನೀಶ್ ಕಿರಣ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಲ್ಲೆ ಘಟನೆಯಲ್ಲಿ ಡಾ.ವೈಶಾಖ್ ಪಣಿಕರ್ ತಲೆಗೆ ಗಾಯಗಳಾಗಿದ್ದು ಅದರ ಪೋಟೋಗ್ರಫಿಯನ್ನೂ ಸಮಿತಿ ಮುಂದೆ ಅವರು ಸಲ್ಲಿಸಿದ್ದಾರೆ. ಆದರೆ ಡಾ. ಪಲ್ಲವಿ ಅನಾರೋಗ್ಯದ ಮಾಹಿತಿ ನೀಡಿ ಸ್ಪಷ್ಟನೆ ನೀಡಿಲ್ಲ, ಪಲ್ಲವಿ ಹೇಳಿರುವಂತೆ ಕೆವಿಜಿ ಕಾಲೇಜಿನಲ್ಲಿ ಆಕೆಯ ಮೇಲೆ ರಾಗಿಂಗ್ ನಡೆದ ವಿಚಾರವನ್ನು ನಮ್ಮ ಗಮನಕ್ಕೆ ತಂದಿಲ್ಲ. ಕೆವಿಜಿಯಲ್ಲಿ ಈವರೆಗೆ ಇಂಥ ಘಟನೆಗೆ ಆಸ್ಪದ ನೀಡಿಲ್ಲ, ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ಡಾ.ಪಲ್ಲವಿ,ಡಾ. ವೈಶಾಖ್ ಪಣಿಕರ್ ಮತ್ತು ಡಾ.ಹನೀಶ್ ಕಿರಣ್ ಅವತನ್ನು ಒಂದು ವಾರಗಳ ಕಾಲ ಸಸ್ಪೆಂಡ್ ಮಾಡಲಾಗಿದೆ. ಹಲ್ಲೆ ಘಟನೆ ನಡೆದ ಬಳಿಕ ಡಾ.ಪಲ್ಲವಿ ಡಿಸೆಂಬರ್ 27 ರಂದು ಕಾಲೇಜಿಗೆ ಬಂದಿದ್ದು, ಹಾಸ್ಟೇಲ್ ನಿಂದ ತಮ್ಮ ಬಟ್ಟೆ ಬರೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಸ್ಪಷ್ಟನೆ ನೀಡಿದ್ದಾರೆ.

- Advertisement -
spot_img

Latest News

error: Content is protected !!