Friday, April 26, 2024
Homeತಾಜಾ ಸುದ್ದಿಪಂಚಭೂತಗಳಲ್ಲಿ ಲೀನವಾದ ಹೀರಾ ಬೆನ್; ಪುತ್ರನಾಗಿ ಎಲ್ಲಾ ರೀತಿಯ ಕರ್ತವ್ಯ ನಿಭಾಯಿಸಿದ ಪ್ರಧಾನಿ ಮೋದಿ

ಪಂಚಭೂತಗಳಲ್ಲಿ ಲೀನವಾದ ಹೀರಾ ಬೆನ್; ಪುತ್ರನಾಗಿ ಎಲ್ಲಾ ರೀತಿಯ ಕರ್ತವ್ಯ ನಿಭಾಯಿಸಿದ ಪ್ರಧಾನಿ ಮೋದಿ

spot_img
- Advertisement -
- Advertisement -

ಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯನ್ನು ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.ಪ್ರಧಾನಿ ಮೋದಿ ತಾಯಿಯ ಪಾರ್ಥೀವ ಶರೀರದ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಈ ಮೂಲಕ ಮೋದಿಯವರ ತಾಯಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಅಹಮದಾಬಾದ್ ನಲ್ಲಿನ ಯು ಎಸ್ ಮೆಹ್ತಾ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರನ್ನು ಮೋದಿ ಭೇಟಿಯಾಗಿಯೂ ಆರೋಗ್ಯ ವಿಚಾರಿಸಿದ್ದರು. ಇಂದು ಅವರನ್ನು ಡಿಸ್ಚಾರ್ಜ್ ಕೂಡ ಮಾಡಲಾಗುತ್ತದೆ ಎನ್ನಲಾಗಿತ್ತು. ಆದ್ರೇ ದಿಢೀರ್ ಚಿಕಿತ್ಸೆ ಫಲಿಸದೇ ನಿಧನರಾಗಿದ್ದರು.

ಇಂತಹ ಅವರ ಪಾರ್ಥೀವ ಶರೀರವನ್ನು ಅಹಮದಾಬಾದ್ ಆಸ್ಪತ್ರಯಿಂದ ಪುತ್ರನ ಮನೆಗೆ ಕೊಂಡೊಯ್ಯಲಾಗಿತ್ತು. ಸೀಮಿತ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ, ಗಾಂಧಿನಗರದ ಸೆಕ್ಟರ್ 30ರಲ್ಲಿನ ರುದ್ರಭೂಮಿಗೆ ಕೊಂಡೊಯ್ಯಲಾಗಿತ್ತು. ಅಂತಿಮ ವಿಧಿ ವಿಧಾನವನ್ನು ಹೀರಾಬೆನ್ ಪುತ್ರರಾಗಿರುವಂತ ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದರು. ಬಳಿಕ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.

ಇನ್ನು ಹೀರಾ ಬೆನ್ ಅವರ ಅಂತಿಮಯಾತ್ರೆಯಲ್ಲಿ ಮೋದಿ ಅವರ ಮೃತದೇಹಕ್ಕೆ ಹೆಗಲು ಕೊಟ್ಟಿದ್ದಾರೆ. ಗಾಂಧಿನಗರದ ರಸ್ತೆಗಳಲ್ಲಿ ತಾಯಿಯ ಮೃತದೇಹವನ್ನು ಹೊತ್ತು ಸಾಗಿದ ನರೇಂದ್ರ ಮೋದಿ ಅಮ್ಮನಿಗೆ ಅಂತಿಮ ವಿದಾಯ ಹೇಳಿದ್ದಾರೆ. ಗುಲಾಬಿ ಹೂವಿನ ಎಸಳುಗಳನ್ನು ಅಂತಿಮಯಾತ್ರೆಯ ರಸ್ತೆಯುದ್ದಕ್ಕೂ ಹಾಕುವ ಮೂಲಕ ಹೀರಾಬೆನ್ ಮೋದಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.

- Advertisement -
spot_img

Latest News

error: Content is protected !!