Wednesday, September 27, 2023
Homeಕರಾವಳಿಉಡುಪಿಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರಡ್ ಫರ್ನಾಂಡಿಸ್ ಇನ್ನಿಲ್ಲ

ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರಡ್ ಫರ್ನಾಂಡಿಸ್ ಇನ್ನಿಲ್ಲ

- Advertisement -
- Advertisement -

ಕುಂದಾಪುರ : ವಿನ್ನಿಯಮ್ಮ ಎಂದೇ ಜನಾನುರಾಗಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಕುಂದಾಪುರದ ಮಾಜಿ ಶಾಸಕಿ ವಿನ್ನಿಫ್ರಡ್ ಫರ್ನಾಂಡಿಸ್ (92) ಏ.28 ಮಂಗಳವಾರ ಮದ್ಯಾಹ್ನ ಕುಂದಾಪುರ ಚರ್ಚ್‌ ರಸ್ತೆಯ ಸ್ವಗ್ರಹದಲ್ಲಿ ನಿಧನರಾದರು.
ಪ್ರಜಾ ಸೋಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದ ಅವರು ಪುರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಎರಡು ಬಾರಿ ಕುಂದಾಪುರ ಕ್ಷೇತ್ರದ ಶಾಸಕಿಯಾಗಿ ‌ಸೇವೆ ಸಲ್ಲಿಸಿದ್ದರು ನಂತರ ವಿಧಾನಪರಿಷತ್ ಸದಸ್ಯೆಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು
ಇವರು ಮೂವರು ಪುತ್ತಿಯರು , ಮೂವರು ಪುತ್ರರು ಸೇರಿದಂತೆ ಅಪಾರ ಬಳಗದ ಬಂದು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ .
ಪ್ರಾಮಾಣಿಕ, ಸರಳ ಸಜ್ಜನಿಕೆ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಕುಂದಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದರು.

- Advertisement -
spot_img

Latest News

error: Content is protected !!