- Advertisement -
- Advertisement -
ಬೆಳ್ತಂಗಡಿ: ಪ್ರಪಂಚದ ಎಲ್ಲಾ ಕಡೆ ಇಂದು ವಿಶೇಷವಾಗಿ ಕೊರೋನ ಎನ್ನುವ ಮಹಾಮಾರಿಯು ಕಾಡಿ ಪ್ರತಿಯೊಬ್ಬ ಪ್ರಜೆಯನ್ನು ಕೂಡ ದುಸ್ತರದ ಸ್ಥಿತಿಗೆ ತಲುಪಿಸಿದೆ. ಇದೇ ಸಂದರ್ಭದಲ್ಲಿ ನಮ್ಮ ಭಾರತ ದೇಶದಲ್ಲಿ ಕೂಡ ಲಕ್ಷೋಪಲಕ್ಷ ಜನರಿಗೆ ಈ ಮಹಾಮಾರಿಯು ಸಂಕಷ್ಟವನ್ನು ತಂದಿರುತ್ತದೆ.
ಈ ಸಂದರ್ಭದಲ್ಲಿ ದೇಶದ ಪ್ರಜೆಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ನಮ್ಮ ಪ್ರಧಾನಿಯವರು ಲಾಕ್‌ಡೌನ್‌ನ್ನು ಘೋಷಣೆ ಮಾಡಿರುತ್ತಾರೆ. ಈ ಕಾರಣದಿಂದಾಗಿ ಅದೆಷ್ಟೋ ಕುಟುಂಬಗಳು ಇಂದು ಜೀವನಾಧಾರವಿಲ್ಲದೇ ತನ್ನ ಬದುಕಿನ ನೆಮ್ಮದಿಯನ್ನು ಕಳೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಉದ್ಯಮಿ ಮೂಡಾಯೂರು ವಿಠ್ಠಲ ಶೆಟ್ಟಿ ದಂಪತಿಗಳು ತನ್ನ ಮಗನಾದ ಪ್ರಶಾಂತ್ ಶೆಟ್ಟಿಯವರೊಂದಿಗೆ ಅರ್ಹ 250 ಬಡಕುಟುಂಬಗಳಿಗೆ ಸುಮಾರು 2.37 ಲಕ್ಷ ರೂ ಆಹಾರ ಸಾಮಗ್ರಿಗಳ ಕಿಟ್‌ನ್ನು ನೀಡಿ ಮಾನವೀಯ ಮೌಲ್ಯವನ್ನು ಸಮಾಜಕ್ಕೆ ತೋರಿಸಿಕೊಟ್ಡಿದ್ದಾರೆ.
- Advertisement -