Wednesday, June 24, 2026
Homeಕರಾವಳಿಉಡುಪಿಕುಂದಾಪುರ : 9 ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ

ಕುಂದಾಪುರ : 9 ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ

- Advertisement -
- Advertisement -

ಕುಂದಾಪುರ : 9 ನೇ ತರಗತಿ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕು ಹೆಸ್ಕುತ್ತೂರು ಗ್ರಾಮದಲ್ಲಿ ನಡೆದಿದೆ. ಹೆಸ್ಕತ್ತೂರು ಗ್ರಾಮದ ಬಸವರಾಜ್ ಎಂಬವರ ಮಗಳು 15 ವರ್ಷದ ಚೈತ್ರಾ ನಾಪತ್ತೆಯಾದಾಕೆ.

ಚೈತ್ರಾ ಹೆಸ್ಕತ್ತೂರು ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡಿಕೊಂಡಿದ್ದು, ಮಧ್ಯಾಹ್ನ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಶಾಲೆಗೂ ಹೋಗದೆ, ವಾಪಸು ಮನೆಗೂ ಬಾರದೇ ಕಾಣೆಯಾಗಿರುವುದಾಗಿ ತಿಳಿದುಬಂದಿದೆ.

ಇವಳು ಎಲ್ಲಿಯಾದರೂ ಕಂಡುಬಂದಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 9480805468, 08254237100 ಗೆ ಮಾಹಿತಿ ನೀಡಲು ತಿಳಿಸಿದೆ.

- Advertisement -

Latest News

error: Content is protected !!