Wednesday, June 3, 2026
Homeಕರಾವಳಿಉಡುಪಿಕುಂದಾಪುರ;ಅಪ್ರಾಪ್ತೆಗೆ ಬಾಲ್ಯವಿವಾಹ; ಬಾಲಕಿಯ ತಂದೆ  ಹಾಗೂ ವರನ ಬಂಧನ

ಕುಂದಾಪುರ;ಅಪ್ರಾಪ್ತೆಗೆ ಬಾಲ್ಯವಿವಾಹ; ಬಾಲಕಿಯ ತಂದೆ  ಹಾಗೂ ವರನ ಬಂಧನ

- Advertisement -
- Advertisement -

ಕುಂದಾಪುರ: ಅಪ್ರಾಪ್ತೆಗೆ ಬಾಲ್ಯವಿವಾಹ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ  ಹಾಗೂ ಮದುವೆಯಾದ ವರನನ್ನು ಬಂಧಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

17 ವರ್ಷ 8 ತಿಂಗಳಾಗಿದ್ದ ಬಾಲಕಿಯನ್ನು ಸಂತ್ರಸ್ತೆಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ಮೇ 21ರಂದು ವಿವಾಹ ಮಾಡಿಸಿದ್ದಾರೆ ಎಂದು ದೂರಲಾಗಿದೆ.

ಈ ಮದುವೆಗೆ ತಾಯಿಯ ಒಪ್ಪಿಗೆ ಇಲ್ಲದ್ದರಿಂದ ಮದುವೆಯ ಬಳಿಕ ಮಗಳನ್ನು ಮನೆಗೆ ಸೇರಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಆರೋಪಿ ಭರತ್ ಶೆಟ್ಟಿ ಆಕೆಯನ್ನು ತೊಂಬಟ್ಟಿನ ತನ್ನ ಮನೆಗೆ ಕರೆದೊಯ್ದಿದ್ದ ಎನ್ನಲಾಗಿದೆ. ಆಪ್ತ ಸಮಾಲೋಚನೆಯ ನಂತರ ನೊಂದ ಬಾಲಕಿ ಬಾಲ್ಯ ವಿವಾಹದ ಬಗ್ಗೆ ದೃಢಪಡಿಸಿದ್ದು ಅವಳ ಜನ್ಮ ದಿನಾಂಕ 25-09-2006 ಆಗಿದ್ದು ಮದುವೆಯಾದ ದಿನಕ್ಕೆ 17 ವರ್ಷ 8 ತಿಂಗಳು ಮಾತ್ರವೇ ಆಗಿದ್ದು, 18 ವರ್ಷ ಪೂರ್ಣಗೊಂಡಿರಲಿಲ್ಲ ಎಂಬುದು ತಿಳಿದುಬಂದಿದೆ.

ಬಾಲ್ಯ ವಿವಾಹ ನಡೆದಿರುವ ಬಗ್ಗೆ ಕುಂದಾಪುರದ ಸಹಾಯಕ ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ದೀಪಾ ಬಂಗೇರರಿಗೆ ದೂರು ಬಂದಿದ್ದು, ಅದರಂತೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!