Thursday, July 16, 2026
Homeಕರಾವಳಿಮಂಗಳೂರಿನಲ್ಲಿ ಕುಡ್ಲದ ಪಿಲಿ ಪರ್ಬ ಹುಲಿವೇಷ ಸ್ಪರ್ಧೆಗೆ ಚಾಲನೆ

ಮಂಗಳೂರಿನಲ್ಲಿ ಕುಡ್ಲದ ಪಿಲಿ ಪರ್ಬ ಹುಲಿವೇಷ ಸ್ಪರ್ಧೆಗೆ ಚಾಲನೆ

- Advertisement -
- Advertisement -

ಮಂಗಳೂರು: ಕುಡ್ಲದ ಪಿಲಿಪರ್ಬ-2022 ಹುಲಿವೇಷದ ತಂಡಗಳ ಮಧ್ಯೆ ನಡೆಯುವ ಸ್ಪರ್ಧೆಯ ಉದ್ಘಾಟನೆ ಇಂದು ಮಂಗಳೂರಿನಲ್ಲಿ ನಡೆಯಿತು.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ದಕ್ಷಿಣ ಕನ್ನಡ ‌ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಸ್ಫರ್ಧೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ದ.ಕ.‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಹಾಗೂ ಬಿಜೆಪಿ ಮುಖಂಡರಾದ ಸಂತೋಷ್ ರೈ ಬೋಳಿಯಾರು, ಸುಧೀರ್ ಶೆಟ್ಟಿ ಕಣ್ಣೂರ್ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮೊದಲ ಬಾರಿಗೆ ಮಂಗಳೂರಿನಲ್ಲಿ ಕುಡ್ಲದ ಪಿಲಿ ಪರ್ಬ ಸ್ಫರ್ಧೆಯನ್ನು ಆಯೋಜಿಸಿದೆ.

- Advertisement -

Latest News

error: Content is protected !!