Saturday, May 4, 2024
Homeಪ್ರಮುಖ-ಸುದ್ದಿಸಾರಿಗೆ ಇಲಾಖೆಯಿಂದ ಶೀಘ್ರದಲ್ಲೇ ಕೊರಿಯರ್ ಸೇವೆ, ಸಾರಿಗೆ ಸಚಿವರಿಂದ ಮಾಹಿತಿ

ಸಾರಿಗೆ ಇಲಾಖೆಯಿಂದ ಶೀಘ್ರದಲ್ಲೇ ಕೊರಿಯರ್ ಸೇವೆ, ಸಾರಿಗೆ ಸಚಿವರಿಂದ ಮಾಹಿತಿ

spot_img
- Advertisement -
- Advertisement -

ಬೆಳಗಾವಿ : ಅಂತರರಾಜ್ಯ ಬಸ್‌ಗಳ ಸೇವೆ ಆರಂಭಿಸಲು‌ ಅನೇಕ ರಾಜ್ಯಕ್ಕೆ ಪತ್ರ ಬರೆಯಲಾಗಿದೆ. ಆಂಧ್ರಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರವೇ ಆಂಧ್ರಪ್ರದೇಶ – ಕರ್ನಾಟಕದ ಮಧ್ಯೆ ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯಗಳಿಂದ ಒಪ್ಪಿಗೆ ಬರಬೇಕಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ತೀವ್ರತೆ ಇರುವುದರಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬಸ್‌ಗಳನ್ನು ಓಡಿಸುವ ಬಗ್ಗೆ ಚಿಂತನೆ ಮಾಡಿಲ್ಲ ಎಂದರು.

ಸಾರಿಗೆ ಇಲಾಖೆ ವತಿಯಿಂದ ಕೊರಿಯರ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಕೊರಿಯರ್ ಸೇವೆ ಆರಂಭವಾಗಲಿದೆ. ಈವರೆಗೆ ಖಾಸಗಿಯವರೇ ಕೊರಿಯರ್ ಸೇವೆ ಒದಗಿಸುತ್ತಿದ್ದರು. ನಮ್ಮ ಸಾರಿಗೆ ಬಸ್‌ಗಳು ಪ್ರತಿ ರಾಜ್ಯ, ಹಳ್ಳಿಗಳಿಗೆ ಹೋಗುತ್ತವೆ. ಕೊರಿಯರ್ ಸೇವೆ ಆರಂಭದಿಂದ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದರು.

- Advertisement -
spot_img

Latest News

error: Content is protected !!