Sunday, June 7, 2026
HomeಕರಾವಳಿSDPI ಲಾಯಿಲಾ ಬ್ರಾಂಚ್ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಅಭಿಯಾನ

SDPI ಲಾಯಿಲಾ ಬ್ರಾಂಚ್ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಅಭಿಯಾನ

- Advertisement -
- Advertisement -

ಬೆಳ್ತಂಗಡಿ ಆ 26 : ಬೆಳ್ತಂಗಡಿ ತಾಲೂಕಿನ ಲಾಯಿಲಾ ಆದರ್ಶ ನಗರ ವ್ಯಾಪ್ತಿಯ ಸಾರ್ವಜನಿಕರಿಗೆ ಭಾರತ ಸರ್ಕಾರದ ಆರೋಗ್ಯ ಯೋಜನೆಯಾಗಿರುವ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೋಂದಾವಣೆ ಅಭಿಯಾನವು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಲಾಯಿಲಾ ಬ್ರಾಂಚ್ ವತಿಯಿಂದ ಲಾಯಿಲಾ ಆದರ್ಶ ನಗರ ಜಂಕ್ಸನ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್ಡಿಪಿಐ ಲಾಯಿಲಾ ಬ್ರಾಂಚ್ ಅಧ್ಯಕ್ಷ ‌ ರಿಯಾಝ್ ಎ.ಪಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾಧ್ಯಕ್ಷ ಜನಾಬ್ ಹೈದರ್ ನೀರ್ಸಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್ಡಿಪಿಐ ತಾಲೂಕು ಸಮಿತಿ ಸದಸ್ಯರಾದ ಸಾದಿಕ್ ಲಾಯಿಲಾ ಹಾಗೂ ಇನ್ನೀತರ ನಾಯಕರು ಉಪಸ್ಥಿತರಿದ್ದರು. ಶಿಬಿರದಲ್ಲಿ 180 ಮಂದಿ ಸಾರ್ವಜನಿಕರು ಹೊಸ ಕಾರ್ಡ್ ನೋಂದಾವಣೆ ಮಾಡಿಕೊಂಡರು. ಎಸ್ಡಿಪಿಐ ಲಾಯಿಲಾ ಹಮ್ಮಿಕೊಂಡ ಈ ಕಾರ್ಯಕ್ರಮವು ಸಾರ್ವಜನಿಕರಿಂದ ಬಾರೀ ಪ್ರಶಂಸೆಗೆ ಪಾತ್ರವಾಯಿತು.

- Advertisement -

Latest News

error: Content is protected !!