Wednesday, June 3, 2026
Homeಕರಾವಳಿವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ : ಕರಾವಳಿಯ ಕಾಂಗ್ರೆಸ್ ನಾಯಕರಿಗೆ ಚುನಾವಣಾ ಜವಾಬ್ದಾರಿ ಹಂಚಿಕೆ

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ : ಕರಾವಳಿಯ ಕಾಂಗ್ರೆಸ್ ನಾಯಕರಿಗೆ ಚುನಾವಣಾ ಜವಾಬ್ದಾರಿ ಹಂಚಿಕೆ

- Advertisement -
- Advertisement -

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ರಾಜ್ಯ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ.

ಕೆಪಿಸಿಸಿ ಉಪಾಧ್ಯಕ್ಷರು ಮತ್ತು‌ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾವಾರು ಮತ್ತು‌ ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿ ನೀಡಲಾಗಿದೆ. ಈ ಪೈಕಿ ಪದಾಧಿಕಾರಿಗಳಾಗಿರುವ ಕರಾವಳಿಯ ಕಾಂಗ್ರೆಸ್ ಮುಖಂಡರಿಗೂ ಜವಾಬ್ದಾರಿ ಹಂಚಿಕೆಯಾಗಿದೆ.

ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಮಂಜುನಾಥ ಭಂಡಾರಿ ಅವರಿಗೆ ಬೆಂಗಳೂರು ಉತ್ತರ, ಪಿ.ವಿ. ಮೋಹನ್ ಅವರಿಗೆ ಹುಬ್ಬಳ್ಳಿ ನಗರ, ಐವಾನ್ ಡಿಸೋಜ ಅವರಿಗೆ ಉತ್ತರ ಕನ್ನಡ, ವಿನಯ್ ಕುಮಾರ್ ಸೊರಕೆ ಅವರಿಗೆ ಕೊಡಗು, ಅಭಯಚಂದ್ರ ಜೈನ್ ಅವರಿಗೆ ಉಡುಪಿ ಮತ್ತು ಬಿ. ರಮಾನಾಥ ರೈ ಅವರಿಗೆ ಚಿಕ್ಕಮಗಳೂರು ಉಸ್ತುವಾರಿ ನೀಡಲಾಗಿದೆ.

ಇನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೃಪಾ ಆಳ್ವ ಅವರಿಗೆ ಮಂಗಳೂರು ನಗರ ಉತ್ತರ, ಮಮತಾ ಗಟ್ಟಿ ಅವರಿಗೆ ಮೂಡಬಿದಿರೆ ಮತ್ತು ಕಾರ್ಕಳ, ಮಿಥುನ್ ರೈ ಮತ್ತು ಪ್ರತಾಪಚಂದ್ರ ಶೆಟ್ಟಿ ಅವರಿಗೆ ಉಡುಪಿ, ಎಂ.ಎ. ಗಪೂರ್ ಅವರಿಗೆ ಚಿಕ್ಕಮಗಳೂರು ಮತ್ತು ಶೃಂಗೇರಿ, ಧನಂಜಯ ಅಡ್ಪಂಗಾಯ ಅವರಿಗೆ ಬೇಲೂರು ಮತ್ತು ಹಾಸನ ಜವಾಬ್ದಾರಿ ಹಂಚಲಾಗಿದೆ.

ಇದಲ್ಲದೇ, ಬೈಂದೂರು ಮತ್ತು ಕುಂದಾಪುರ ಕ್ಷೇತ್ರಗಳಿಗೆ ಗಜಾನನ ತರಿಸ್ಕರ್, ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಇನಾಯತ್ ಅಲಿ, ಸುಳ್ಯ ಕ್ಷೇತ್ರಕ್ಕೆ ಅರುಣ್ ಮಾಚಯ್ಯ, ಬಂಟ್ವಾಳ ಮತ್ತು ಪುತ್ತೂರು ಕ್ಷೇತ್ರಗಳಿಗೆ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಕ್ಷೇತ್ರಕ್ಕೆ ಪ್ರತಾಪಚಂದ್ರ ಶೆಟ್ಟಿ ಮತ್ತು ಮಧು ಬಂಗಾರಪ್ಪ ಅವರನ್ನು‌ ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

- Advertisement -

Latest News

error: Content is protected !!