Tuesday, May 14, 2024
Homeಉತ್ತರ ಕನ್ನಡಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತರನ್ನ ತುಂಬುವುದು ತಪ್ಪಲ್ಲ: ಕಾರವಾರದಲ್ಲಿ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ...

ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತರನ್ನ ತುಂಬುವುದು ತಪ್ಪಲ್ಲ: ಕಾರವಾರದಲ್ಲಿ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ 

spot_img
- Advertisement -
- Advertisement -

ಕಾರವಾರ : ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಭಕ್ತರನ್ನ ತುಂಬುವುದು ತಪ್ಪಲ್ಲ ಎಂದು ಕಾರವಾರದಲ್ಲಿ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ್ದಾರೆ.

ಪಠ್ಯ-ಪುಸ್ತಕಗಳ ಪರಿಷ್ಕರಣೆ ಹೊಸದೂ ಅಲ್ಲ. ಮುಂದಿನ ಪೀಳಿಗೆಗೆ ರಾಷ್ಟ್ರೀಯತೆ ಅಂದ್ರೆ ಏನು ಅಂತಾ ಹೇಳಬೇಕಾದ ಅಗತ್ಯತೆ ಇದೆ. ಅದಕ್ಕೆ ಅವಶ್ಯಕವಾದ ಪಠ್ಯಗಳ ಅಳವಡಿಕೆಗೆ ತಜ್ಞರ ಸಮಿತಿ ಪರಿಷ್ಕರಣೆ ಮಾಡಿದೆ. ಆದರೆ ವಿನಾಕಾರಣ ಗೊಂದಲ ಸೃಷ್ಟಿಸುವಂತಹ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. ಈ ಹಿಂದೆ ಅಸಹಿಷ್ಣುತೆ ಕಾರಣ ನೀಡಿ ಶ್ರೇಷ್ಠರು ತಮಗೆ ಸಿಕ್ಕ ಪ್ರಶಸ್ತಿ ವಾಪಸ್ ನೀಡೋದಾಗಿ ಹೇಳಿದ್ದರು. ಆದ್ರೆ ಇಲಾಖೆಯವರ ಬಳಿ ಕೇಳಿದಾಗ ಯಾರೂ ಸಹ ಪ್ರಶಸ್ತಿಯನ್ನಾಗಲಿ, ಹಣವನ್ನಾಗಲಿ ವಾಪಸ್ ಮಾಡಿರಲಿಲ್ಲ. ಹೀಗೆ ಗುಮ್ಮನನ್ನು ಬಿಟ್ಟು ಹೆದರಿಸುವ ಪದ್ದತಿ ಹಿಂದಿನಿಂದಲೂ ಇದೆ ಎಂದು ಹೇಳಿದ್ದಾರೆ.

ದೇವನೂರು ಮಹಾದೇವನಂಥವರು ಕೆಲವೊಂದು ವಿಚಾರಗಳನ್ನ ಉಲ್ಲೇಖಿಸಿದ್ದಾರೆ. ಅವರು ತಿಳಿದುಕೊಂಡಿರುವ ತಪ್ಪಿನ‌ ವಿಚಾರಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗುವುದು. ಕೆಲವರು ಪಠ್ಯಪುಸ್ತಕದಿಂದ ತನ್ನ ಪಾಠವನ್ನ ತೆಗೆಯಿರಿ ಎಂದು ಹೇಳಿಕೆ ನೀಡಿದ್ದಾರೆ.ಕೆಲವರ ಪಾಠಗಳೇ ಪುಸ್ತಕದಲ್ಲಿ ಇಲ್ಲ, ಸುಮ್ಮನೆ ಹೇಳಿಕೆ ಕೊಟ್ಟವರೂ ಇದ್ದಾರೆ.ಇದರಲ್ಲಿ ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ. ಎಲ್ಲರ ಸಲಹೆ ಕೇಳುತ್ತೇವೆ, ಸರಿಯಾದುದನ್ನೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -
spot_img

Latest News

error: Content is protected !!