Monday, May 6, 2024
Homeಕರಾವಳಿಸುಳ್ಯದ ಕಡೆಪಾಲದಲ್ಲಿ ಕೊರಗಜ್ಜನ ಪವಾಡ; ಕೊಟ್ಟ ಮಾತಿನಂತೆ ಗಿಡ ನೆಟ್ಟು ತೋರಿಸಿದ ಕೊರಗ ತನಿಯ

ಸುಳ್ಯದ ಕಡೆಪಾಲದಲ್ಲಿ ಕೊರಗಜ್ಜನ ಪವಾಡ; ಕೊಟ್ಟ ಮಾತಿನಂತೆ ಗಿಡ ನೆಟ್ಟು ತೋರಿಸಿದ ಕೊರಗ ತನಿಯ

spot_img
- Advertisement -
- Advertisement -

ಸುಳ್ಯ; ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ. ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲದೇ ಅಜ್ಜನನ್ನು ನಂಬಿದರೆ ಆತ ಎಂದಿಗೂ ಕೈ ಬಿಡಲ್ಲ ಅನ್ನೋದಕ್ಕೆ ಭಕ್ತರ ಬಳಿ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ. ಇನ್ನು ಕೊರಗಜ್ಜ ತುಳುನಾಡಿನಲ್ಲಿ ಆಗಾಗ್ಗೆ ತನ್ನ ಕಾರ್ಣಿಕವನ್ನು ಮೆರೆಯುತ್ತಲೇ ಇರುತ್ತಾನೆ.

ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿ ಕೊರಗಜ್ಜನ ದೈವಸ್ಥಾನಗಳಿದ್ದು ಅವುಗಳು ತಮ್ಮದೇ ಆದ ಕಾರ್ಣಿಕವನ್ನು ಹೊಂದಿದೆ. ಪ್ರತಿ ದೈವಸ್ಥಾನದಲ್ಲೂ ಕೊರಗಜ್ಜ ತನ್ನ ಇರುವಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸುತ್ತಾನೆ, ಪವಾಡಗಳ ಮೂಲಕ ಭಕ್ತರ ನಂಬಿಕೆಯನ್ನು ಹೆಚ್ಚಿಸಿ ಪೊರೆಯುತ್ತಿದ್ದಾನೆ. ಇದೇ ರೀತಿಯ ಪವಾಡವೊಂದು ದಕ್ಷಿಣಕನ್ನಡ ಜಿಲ್ಲೆಯ ಗಡಿ ಭಾಗ ಕಲ್ಲುಗುಂಡಿ ಸಮೀಪದ ಕಡೆಪಾಲದಲ್ಲಿರುವ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನಡೆದಿದೆ.

ಈ ದೈವಸ್ಥಾನದಲ್ಲಿ ಕಳೆದ ವರ್ಷ ಅಂದರೆ 2022 ಏಪ್ರಿಲ್ 21ರಿಂದ  25 ರವರೆಗೆ  ಪುನಃ ಪ್ರತಿಷ್ಠಾ ಕಲಶೋತ್ಸವ ನಡೆದು ನೇಮೋತ್ಸವ ನಡೆದಿತ್ತು. ಈ. ಸ್ವಾಮಿ ಕೊರಗಜ್ಜನ ನೇಮೋತ್ಸವದ ದಿನ, ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ)ನೆಡುವ ಬಗ್ಗೆ ಕೊರಗಜ್ಜ ಇಲ್ಲಿಯ ಆಡಳಿತ ಸಮಿತಿಯವರಲ್ಲಿ ಕೇಳಿದಾಗ, “ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ) ಕಟ್ಟೆಯ ಪಕ್ಕ ನೆಟ್ಟು ಬೆಳೆಸಿದರೆ, ಅಜ್ಜನ ಕಟ್ಟೆಗೆ ಮರದ ಬೇರು ಹೋಗಿ ಬಿರುಕು ತೊಂದರೆ ಆಗಬಹುದು. ಹಾಗಾಗಿ ನಾವು ನೆಡುವುದಿಲ್ಲ ಎಂದು ಹೇಳಿದ್ದಾರೆ. ಆಗ ಕೊರಗಜ್ಜ “ನಾನೇ ನನಗೆ ಬೇಕಾದ ಹಾಲು ಬರುವ ಮರವನ್ನು, ನನ್ನ ಕಟ್ಟೆಗೆ ಒಡಕು ಬಾರದ ಹಾಗೆ, ಹುಟ್ಟಿಸಿದರೆ ನಿಮಗೆ ಸಂತೋಷನಾ?” ಎಂದು ಕೇಳಿದ್ದಾರೆ. ಅಜ್ಜನ ಮಾತನ್ನು ಎಲ್ಲರೂ ಸಂತೋಷದಿಂದಲೇ ಸಮಿತಿಯವರು ಒಪ್ಪಿಕೊಂಡಿದ್ದಾರೆ. ಇದೀಗ ಪ್ರತಿಷ್ಠೆ ನಡೆದು 3 ವರ್ಷ ಆಗುತ್ತಿದ್ದು, 3 ನೇ ವರ್ಷದ ನೇಮೋತ್ಸವಕ್ಕೆ ದೈವಸ್ಥಾನ ವಠಾರವನ್ನು ಸ್ವಚ್ಛ ಮಾಡುವಾಗ  ಕೆಲಸ ಸಾಗುತ್ತಿದೆ. ಹೀಗಿರುವಾಗ ಅಜ್ಜನ ಕಟ್ಟೆಯ ಹಿಂಭಾಗದಲ್ಲಿ ದೈವಸ್ಥಾನದ ಮಾಜಿ ಅಧ್ಯಕ್ಷ  ತೇಜೇಶ್ ಹಾಗೂ ದೈವಸ್ಥಾನದ ಪೂಜಾರಿ ಈಶ್ವರ ಕಡೆಪಾಲ ಸ್ವಚ್ಛಗೊಳಿಸುತ್ತಿದ್ದಾಗ  ಹುಲ್ಲಿನ ನಡುವೆ ಸ್ವಾಮಿ ಕೊರಗಜ್ಜ ಹೇಳಿದ “ಭೂತ ಸಂಪಿಗೆ ಮರದ ಗಿಡ ಮಣ್ಣಿನಡಿಯಿಂದ ಹುಟ್ಟಿ ಬಂದಿರೋದು ಕಂಡಿದೆ. ಇದು ಅಜ್ಜನ ಕಾರ್ಣಿಕಕ್ಕೆ ಸಾಕ್ಷಿ ಯಾಗಿದೆ. ಪ್ರತಿಷ್ಠೆ ನಡೆದು 2 ವರ್ಷ ಮುಗಿದು,3ನೇ ವರ್ಷದ ನೇಮೋತ್ಸವಕ್ಕೆ ತಯಾರಾಗುತ್ತಿರುವಾಗಲೇ, ಅಜ್ಜ ಅವತ್ತು ಕಟ್ಟಿದ ಕೋಲದಲ್ಲಿಯೇ ನುಡಿದ ಅಭಯದ ನುಡಿಯಂತೆ 2ವರ್ಷದ ಬಳಿಕ, ಅಜ್ಜನ ಸಾನಿಧ್ಯದಲ್ಲಿ, ಅಜ್ಜನ ಕಟ್ಟೆಯ ಪಕ್ಕದಲ್ಲಿಯೇ, ಹಾಲು ಬರುವ ಮರವನ್ನು (ಭೂತ ಸಂಪಿಗೆ ಮರ )ಹುಟ್ಟಿಸಿ “ಸ್ವಾಮಿ ಕೊರಗಜ್ಜ ಪವಾಡವನ್ನೇ ಮಾಡಿದ್ದಾರೆ. ಭೂತ ಸಂಪಿಗೆಯ ಮರ ಹುಟ್ಟಿರೋದು ನಮ್ಮ ಕಣ್ಣಿಗೆ ತೋರಿಸಿದ ಸ್ವಾಮಿ ಕೊರಗಜ್ಜ “ಪೂಜಾರಿಯ ಮೈಮೇಲೆ ಬಂದು, ಸಮಿತಿಗೆ ಅಭಯದ ನುಡಿ ಹೇಳಿದ್ದಾರೆ. ಆ ಮೂಲಕ ಅಂತೂ ಕಡೆಪಾಲದ ಸಾನಿಧ್ಯದಲ್ಲಿರುವ “ಸ್ವಾಮಿ ಕೊರಗಜ್ಜ” ಕಟ್ಟಿದ ಕೋಲದಲ್ಲಿ ನುಡಿದಂತೆ, ತನ್ನ ಇರುವಿಕೆಯನ್ನು “ಭೂತ ಸಂಪಿಗೆಯ” ಮರವನ್ನು ಹುಟ್ಟಿಸಿ, ನಂಬಿದವರನ್ನು ಯಾವತ್ತು ಕೈ ಬಿಡೋದಿಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.ಅಲ್ಲದೇ ಕೊರಗಜ್ಜನ ನುಡಿ  ಯಾವತ್ತಿಗೂ ಸುಳ್ಳಾಗೋದಿಲ್ಲ ಅನ್ನೋದನ್ನು ನಿರೂಪಿಸಿದ್ದಾರೆ.

- Advertisement -
spot_img

Latest News

error: Content is protected !!