Wednesday, June 24, 2026
Homeಕರಾವಳಿಬಂಟ್ವಾಳ: ಮೇಯಲು ಕಟ್ಟಿ ಹಾಕಿದಲ್ಲಿಂದ ನಾಪತ್ತೆಯಾಗಿದ್ದ ಕೋಣಗಳು ಪತ್ತೆ

ಬಂಟ್ವಾಳ: ಮೇಯಲು ಕಟ್ಟಿ ಹಾಕಿದಲ್ಲಿಂದ ನಾಪತ್ತೆಯಾಗಿದ್ದ ಕೋಣಗಳು ಪತ್ತೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ: ಮೇಯಲು ಕಟ್ಟಿ ಹಾಕಿದಲ್ಲಿಂದ ನಾಪತ್ತೆಯಾಗಿದ್ದ ಮೂರು ಕೋಣಗಳಲ್ಲಿ ಎರಡು ಕೋಣಗಳು ಜೀವಂತ ಪತ್ತೆಯಾಗಿದ್ದು ಇನ್ನೊಂದು ಕೋಣ ಶವವಾಗಿ ಪತ್ತೆಯಾಗಿದೆ.
ಅಮ್ಮುಂಜೆ ದೇವಂದಬೆಟ್ಟು ವಿನಯ ಬಲ್ಯಾಯ ಎಂಬವರ ಮನೆಯ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಿ ಹಾಕಿದ್ದ ಸುಮಾರು 90 ಸಾವಿರ ಮೌಲ್ಯದ ಮೂರು ಕೋಣಗಳು ಡಿ.17 ರಂದು ನಾಪತ್ತೆಯಾಗಿತ್ತು.ಆದರೆ ಎಷ್ಟು ಹುಡುಕಿ ದರೂ ಕೋಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಇಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ಗೆ ದೂರು ನೀಡಿದ್ದರು.ಜೊತೆಗೆ ಮಹಮ್ಮದ್ ಹನೀಫ್ ಎಂಬಾತನ ಮೇಲೆ ಸಂಶಯವಿದ್ದು ಈತ ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ತಿಳಿಸಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ವೇಳೆ ಕೋಣಗಳು ಪತ್ತೆಯಾಗಿದೆ.
ಮೂರು ಕೋಣಗಳ ಪೈಕಿ ಎರಡು ಕೋಣಗಳು ಸ್ವಲ್ಪ ದೂರದ ಗುಡ್ಡವೊಂದರಲ್ಲಿ ಮೇಯುತ್ತಿದ್ದರೆ, ಇನ್ನೊಂದು ಕೋಣ ಮಾತ್ರ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಹೂತು ಮೇಲೆ ಬರಲಾಗದೆ ಮೃತಪಟ್ಟಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಸ್ಥಳೀಯರು ಕೋಣಗಳು ಇರುವುದನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ‌. ಬಳಿಕ ಕೋಣಗಳನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದೀಗ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿ ಆತ ಕಳವು ಪ್ರಕರಣದಲ್ಲಿದ ಕಾರಣ ಆತನನ್ನು ಬಿಟ್ಟು ಕಳುಹಿಸಲಾಗಿದೆ.ಗೊಂದಲ ಉಂಟುಮಾಡಿದ್ದ ಕೋಣಗಳ ಕಳವು ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.

- Advertisement -

Latest News

error: Content is protected !!