Friday, May 3, 2024
Homeಕರಾವಳಿಉಡುಪಿಉಡುಪಿ; ಮತ್ತೆ ತನ್ನ ಕಾರ್ಣಿಕ ತೋರಿಸಿದ ಕೊರಗಜ್ಜ; ನಿದ್ದೆಯಲ್ಲಿ ನಡೆಯುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಕೊರಗಜ್ಜ

ಉಡುಪಿ; ಮತ್ತೆ ತನ್ನ ಕಾರ್ಣಿಕ ತೋರಿಸಿದ ಕೊರಗಜ್ಜ; ನಿದ್ದೆಯಲ್ಲಿ ನಡೆಯುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಕೊರಗಜ್ಜ

spot_img
- Advertisement -
- Advertisement -

ಉಡುಪಿ; ಕರಾವಳಿಯಲ್ಲಿ ಕೊರಗಜ್ಜನ ಪವಾಡ ಪದೇ ಪದೇ ಸಾಬೀತಾಗುತ್ತಲೇ ಇದೆ. ಆಗಾಗ್ಗೆ ಕೊರಗಜ್ಜ ತನ್ನ ಪವಾಡಗಳನ್ನು ತೋರಿಸುತ್ತಾ ತಾನು ನಂಬಿದವರನ್ನು ಕೈ ಬಿಡಲ್ಲ ಅನ್ನೋದನ್ನು ತೋರಿಸುತ್ತಿದ್ದಾನೆ. ಕೊರಗಜ್ಜನ ಕಾರ್ಣಿಕ ಎಂತಹದ್ದು ಅನ್ನೋದಕ್ಕೆ ಸಾಕ್ಷಿಗಳು ನೂರಾರಿವೆ. ಹಾಗೇ ತನ್ನನ್ನು ನಂಬಿದವರನ್ನು ಕೈಬಿಡಲ್ಲ ಅನ್ನೋದು ನಂಬಿದವರಿಗೆ ಗೊತ್ತಿರುವ ಅಪ್ಪಟ ಸತ್ಯ. ಇದೀಗ ಕೊರಗಜ್ಜನ ಕಾರ್ಣಿಕ ತೋರಿಸುವಂತಹ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.

ಇಂದು ಮುಂಜಾನೆ 2-30ರ  ವೇಳೆಗೆ ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ರಾತ್ರಿ ನಿದ್ದೆ ಕಣ್ಣಿನಲ್ಲಿ ಎದ್ದು ಪುಟ್ಟ ಬಾಲಕಿಯೊಬ್ಬಳು ಮನೆಯಿಂದ ಸೀದಾ ಮೂರು ಕಿಲೋ ದೂರದವರೆಗೆ ನಡೆದು ಬಂದಿದ್ದಾಳೆ.  ಹೀಗೆ ಬಂದ ಬಾಲಕಿ ಕೆದೂರಿನ ಕೊರಗಜ್ಜ ದೈವಸ್ಥಾನ ನಾಮಫಲಕದ ಮುಂದೆ ಬಂದು ನಿಂತಿದ್ದಾಳೆ.. ಮಧ್ಯರಾತ್ರಿ 2-30ಕ್ಕೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವ ವ್ಯಕ್ತಿ ಆ ಮಗುವನ್ನು ನೋಡಿ ಕಾರು ನಿಲ್ಲಿಸಿದ್ದಾರೆ.ಕಾರು ನಿಲ್ಲಿಸಿ ಮಗುವನ್ನು ಮಾತಾಡಿಸಿದಾಗ ಬಾಲಕಿ ನಿದ್ದೆಗಣ್ಣಲ್ಲಿ ನಡೆದುಕೊಂಡು ಬಂದಿರುವ ವಿಚಾರ ಬಯಲಾಗಿದೆ. ಬಳಿಕ  ಮಗುವನ್ನು ಸುರಕ್ಷಿತವಾಗಿ ಆಕೆಯ ಮನೆಗೆ ಹೋಗಿ ಬಿಟ್ಟು ಬಂದಿದ್ದಾರೆ. ಸದ್ಯ, ಈ ಘಟನೆಯ ಬಗ್ಗೆ ತಿಳಿಯುಳುತ್ತಿದ್ದಂತೆ ಸ್ಥಳೀಯರು ಇದೆಲ್ಲಾ ಕೊರಗಜ್ಜ ಪವಾಡ ಎನ್ನುತ್ತಿದ್ದು ಮಗು ಕ್ಷೇಮವಾಗಿ ತಲುಪಿದ್ದು ಕೊರಗಜ್ಜನ ದಯೆಯಿಂದ ಎಂದು ಹೇಳಲಾಗುತ್ತಿದೆ.

ಅಲ್ಲದೇ ಕೊರಗಜ್ಜನ ದೇವಸ್ಥಾನದಿದಂ ಮಗುವಿನ ಮನೆಗೆ ಸುಮಾರು 3 ಕಿಲೋ ಮೀಟರ್ ದೂರವಿದೆ ಹೀಗಿದ್ದರೂ ಮಗು ಕತ್ತಲಲ್ಲಿ ನಡೆದುಕೊಂಡು ಬಂದು ಕೊರಗಜ್ಜನ ದೈವಸ್ಥಾನದ ಬಳಿಯೇ ಬಂದು ನಿಂತಿದ್ದು ಹೇಗೆ ಅಂತಾ ಅಜ್ಜನ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗೇ ಪೋಷಕರ ನಿರ್ಲಕ್ಷ್ಯಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿದೆ ಪುಟ್ಟ ಮಗು ಮಧ್ಯರಾತ್ರಿ ಎದ್ದು ಬರುವಾಗ ಪೋಷಕರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸುತ್ತಿದ್ದಾರೆ. ಏನೇ ಆಗಲಿ ಇದೆಲ್ಲಾ ಕೊರಗಜ್ಜನ ಪವಾಡ ಅಂತಿದ್ದಾರೆ ಭಕ್ತರು..

- Advertisement -
spot_img

Latest News

error: Content is protected !!