Thursday, June 4, 2026
Homeತಾಜಾ ಸುದ್ದಿಗೆಳಯನನ್ನು ಭೇಟಿಯಾಗಲು ಇಡೀ ಗ್ರಾಮದ ವಿದ್ಯುತ್ ಕಡಿತಗೊಳಿಸುತ್ತಿದ್ದ ಯುವತಿ;ಗ್ರಾಮಸ್ಥರಿಗೆ ಸಿಕ್ಕಿ ಬಿದ್ದ ಮೇಲೆ ಏನಾಯ್ತು?

ಗೆಳಯನನ್ನು ಭೇಟಿಯಾಗಲು ಇಡೀ ಗ್ರಾಮದ ವಿದ್ಯುತ್ ಕಡಿತಗೊಳಿಸುತ್ತಿದ್ದ ಯುವತಿ;ಗ್ರಾಮಸ್ಥರಿಗೆ ಸಿಕ್ಕಿ ಬಿದ್ದ ಮೇಲೆ ಏನಾಯ್ತು?

- Advertisement -
- Advertisement -

ಬಿಹಾರ; ಗೆಳಯನನ್ನು ಭೇಟಿಯಾಗಲು ಇಡೀ ಗ್ರಾಮದ ವಿದ್ಯುತ್ ಕಡಿತಗೊಳಿಸುತ್ತಿದ್ದ ಯುವತಿ ಗ್ರಾಮಸ್ಥರಿಗೆ ಸಿಕ್ಕಿ ಬಿದ್ದ ಘಟನೆ ಬಿಹಾರದ ಬೆಟ್ಟಿಯಾ ಗ್ರಾಮದಲ್ಲಿ ನಡೆದಿದೆ.

ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸುತ್ತಿದ್ದ ಟ್ರಾನ್ಸ್ ಫಾರ್ಮರ್‌ ಬಳಿ ಬಂದು ಯುವತಿಯೊಬ್ಬಳು ಪ್ರೇಮಿಯನ್ನು ಭೇಟಿಯಾಗುತ್ತಿದ್ದಳು. ಇದು ಯಾರಿಗೂ ಗೊತ್ತಾಗಬಾರದೆಂದು ಪ್ರಿಯಕರ ಬಂದು ಮೊದಲು ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ಎಬಿ (ಏರ್ ಬ್ರೇಕ್ ಸ್ವಿಚ್) ಸ್ವಿಚ್ ಕೆಳಗೆ ಬೀಳಿಸುತ್ತಿದ್ದನು. ಇದರಿಂದಾಗಿ ಇಡೀ ಗ್ರಾಮದಲ್ಲಿ ಕರೆಂಟ್ ಹೋಗುತ್ತಿತ್ತು. ಬಳಿಕ  ಇಬ್ಬರೂ ಕತ್ತಲಲ್ಲಿ ಭೇಟಿಯಾಗುತ್ತಿದ್ದರು

ಗ್ರಾಮದಲ್ಲಿ ದಿನಾಲೂ ಕರೆಂಟ್ ಕಟ್ ಆಗುವ ಕಾರಣ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು,ಜನರು ನಿಗಾ ವಹಿಸಿದ್ದರು.ಹೀಗಾಗಿ ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದರು.ಇದೇ ವೇಳೆ ಜುಲೈ 14ರಂದು ಗೆಳತಿಯನ್ನು ಭೇಟಿಯಾಗಲು ಬಂದಿದ್ದ ಲವರ್ಸ್ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ನೌತಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಡಿಯೋ ವೈರಲ್ ಆದ ಬಳಿಕ ಯುವತಿಯ ಪ್ರೇಮಿ ಆಕೆಯ ಗ್ರಾಮಕ್ಕೆ ಬಂದು ಆಕೆಯನ್ನು ಥಳಿಸಿದವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೀಡಿಯೋ ಆಧರಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.ಇದೇ ವೇಳೆ ಪ್ರಿಯಕರ ಮತ್ತು ಗೆಳತಿಯ ಕುಟುಂಬಗಳ ನಡುವೆ ಸಮಸ್ಯೆ ಇತ್ಯರ್ಥವಾಗಿದೆ.

ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ನೌತನ್ ಪೊಲೀಸ್ ಠಾಣೆಯ ಮುಖ್ಯಸ್ಥ ಖಾಲಿದ್ ಅಖ್ತರ್, ಈ ವಿಷಯವು ಪ್ರೇಮ ಸಂಬಂಧವಾಗಿದೆ.ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!